Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿಲ್ಲಾಧಿಕಾರಿಗೆ ‘ಜನಸ್ನೇಹಿ ಆಡಳಿತಗಾರ’ ಬಿರುದು ಪ್ರದಾನ

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಪ್ರಗತಿಪರರಿಂದ ಜನಸ್ನೇಹಿ ಅಡಳಿತಗಾರ ಬಿರುದು ಪ್ರದಾನ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮಂಡ್ಯನಗರದ ಡಿ ಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀ ಕಂಠೇಗೌಡ ಬಿರುದು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಡಿ ಸಿ ಡಾ.ಕುಮಾರ ಅವರು ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಜನರ ನಿರೀಕ್ಷೆಯಂತೆ ಇನ್ನೂ ಕೆಲಸ ಮಾಡಬೇಕು ಎಂದು ಅಶಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಡಿ ಸಿ ಡಾ.ಕುಮಾರ ಅವರು ಅಪರೂಪದ ಜಿಲ್ಲಾಧಿಕಾರಿ ಎಂದು ಬಣ್ಣಿಸಿದರು. ಜನಸ್ನೇಹಿ ಆಡಳಿತಗಾರರಾಗಿರುವ ಜೊತೆಗೆ ಉದಾತ್ತ ನಡವಳಿಕೆ ಹೊಂದಿದ್ದಾರೆ ಎಂದರು.

ಈ ವೇಳೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಭೀಮ್ ಆರ್ಮಿಯ ಜೆ.ರಾಮಯ್ಯ, ಅಂಬೇಡ್ಕರ್ ವಾರಿಯರ್ಸ್’ನ  ಗಂಗರಾಜ್, ಸಮಸಮಾಜದ ಸಂಘಟನೆ ನರಸಿಂಹಮೂರ್ತಿ, ದಸಂಸ ಮುಖಂಡ ಎಂ.ವಿ.ಕೃಷ್ಣ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ