Friday, November 20, 2026

ಪ್ರಾಯೋಗಿಕ ಆವೃತ್ತಿ

ಮುಂದಿನ ಪೀಳಿಗೆಗೆ ಚರಿತ್ರೆ ತಿಳಿಸಲು ಛಾಯಾಗ್ರಹಣ ಅಗತ್ಯ : ನಂದಿನಿ

ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘ, ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ವತಿಯಿಂದ ಈ ದಿನ 186ನೇ ,”ವಿಶ್ವ ಛಾಯಾಗ್ರಹಣ ದಿನಾಚರಣೆ ” ಅಂಗವಾಗಿ ಮಂಡ್ಯ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಪ್ರೆಸ್ ಕ್ಲಬ್) ದಲ್ಲಿ “ಅಸಂಘಟಿತ ಕಾರ್ಮಿಕರ ನೋಂದಣಿ ಕಾರ್ಯಕ್ರಮ”ವು ಸೋಮವಾರ ನಡೆಯಿತು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ಛಾಯಾಗ್ರಹಣ ತಂತ್ರಜ್ಞಾನ ಮುಂದುವರಿಯದ ದಿನಗಳಲ್ಲಿ ತುಂಬಾ ಕಷ್ಟವಾಗುತ್ತಿತ್ತು, ಪ್ರತಿಯೊಂದು ಜೀವನ ಹಾಗೂ ಪ್ರತಿಯೊಂದು ಸನ್ನಿವೇಶವನ್ನು ಮುಂದಿನ ಪೀಳಿಗೆಗೆ ಚರಿತ್ರೆ ತಿಳಿಸಲು ಛಾಯಾಗ್ರಹಣ ( ಫೋಟೋ ವಿಡಿಯೋ) ಬಹಳ ಮುಖ್ಯವಾದದ್ದು, ಹಿಂದೆ ತಂತ್ರಜ್ಞಾನ ಇಲ್ಲದಿರುವಾಗ ಫೋಟೋವನ್ನು ತೆಗೆದು ತೊಳೆಯಲು ಕತ್ತಲೆ ಕೋಣೆಯಲ್ಲಿ ಕಷ್ಟವಾಗುತ್ತಿತ್ತು, ಮತ್ತು ಬಹಳ ಪರಿಶ್ರಮವಿತ್ತು ಆದರೆ ಇವಾಗ ತಂತ್ರಜ್ಞಾನ ಬಹಳ ಮುಂದುವರಿದಿದೆ, ಆದರೂ ನನಗೂ ಸಹ ಫೋಟೋಗ್ರಫಿಯಲ್ಲಿ ಬಹಳ ಆಸಕ್ತಿ ಇರುವುದರಿಂದ ಈ ಒಂದು ಕಾರ್ಯಕ್ರಮದಲ್ಲಿ ನಾನು ಬಂದು ಭಾಗವಹಿಸಿದ್ದೇನೆ ಎಂದರು.

ದೇಶದಲ್ಲಿ ಎಲ್ಲೇ ಏನೇ ನಡೆದರೂ ಛಾಯಾಗ್ರಹಣ (ಫೋಟೋ), ಮತ್ತು ವಿಡಿಯೋದಿಂದ ನೋಡಲು ಸಾಧ್ಯ. ಮತ್ತು ತಾವೆಲ್ಲರೂ ಒಂದು ಸಂಘಟನೆಯಿಂದ ಈ ಒಂದು ಸೌಲಭ್ಯವನ್ನು ಪಡೆಯಬೇಕೆಂದು ಹೇಳಿದರು.
ಒಬ್ಬ ವ್ಯಕ್ತಿಯ ನೆನಪನ್ನು ಸದಾ ಅಚ್ಛ ಹಸಿರಾಗಿ ಮನಸ್ಸಿನಲ್ಲಿ ಉಳಿಯಲು ಛಾಯಾಗ್ರಹಣ ಮತ್ತು ವಿಡಿಯೋ ಬಹಳ ಅತ್ಯುತ್ತಮವಾಗಿದೆ. ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಸವಿತಾ ಮಹೇಶ್ ಮಾತನಾಡಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಮತ್ತು ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಉಪಯೋಗಗಳ ಬಗ್ಗೆ ಇದರಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಕಾರ್ಮಿಕರ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡನ್ನು ತಮಗೆಲ್ಲರಿಗೂ ಕಾರ್ಮಿಕ ಸಚಿವರಾದ
ಸಂತೋಷ ಎಸ್.ಲಾಡ್ ಅವರಿಂದ ಪ್ರತಿಯೊಬ್ಬರಿಗೂ ಮಾಡಿಸಿಕೊಡುತ್ತೇನೆ ಎಂದು ಭರವಸೆ ಹೇಳಿದರು.
ಆದ್ದರಿಂದ ಪ್ರತಿಯೊಬ್ಬರೂ ಈ ಒಂದು ಕಾರ್ಡ್ನ ಮಾಡಿಸಲು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಂಡವ್ಯವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ವಿನೋದ್ ಎಸ್. ಗೌಡ, ಉಪಾಧ್ಯಕ್ಷ ಕಾರ್ತಿಕ್ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ರುಬಿನ್, ಖಜಾಂಚಿ ನಿರಂಜನ್ (ರಂಜು), ಸಹ ಕಾರ್ಯದರ್ಶಿ ಅಂಕೇಗೌಡ, ಸಂಘಟನಾ ಕಾರ್ಯದರ್ಶಿ ಜಿ.ಆರ್.ಮಹೇಶ್ ಗೆಜ್ಜಲಗೆರೆ, ಹಾಗೂ ಕಾರ್ಯಕಾರಿ ಮಂಡಳಿಯ ಸಬ್ನಳ್ಳಿರಾಜು, ಲಕ್ಷ್ಮಣ್ ಪಟೇಲ್, ದಿನೇಶ್ ಕುಮಾರ್, ಜಗದೀಶ್, ಎಚ್.ಎಸ್.ಮಹೇಶ್, ಕೆ.ಕೆ.ಪ್ರಭು, ಹರೀಶ್ ಕುಮಾರ್, ಕೆ.ಪಿ.ಕುಮಾರ್, ಮತ್ತು ಛಾಯಾಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ