ವರದಿ: ನ.ಲಿ.ಕೃಷ್ಣ
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಭೂ ಬ್ಯಾಂಕ್ ನ ವೈಭವದ ದಿನಗಳನ್ನು ಮರಳಿ ತರುವಲ್ಲಿ ಷೇರುದಾರರ ಸಹಕಾರ ಅಗತ್ಯ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪೇಗೌಡ ತಿಳಿಸಿದರು
ಮದ್ದೂರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ 2022-2023 ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರು ನಿಶ್ಚಿತ ಠೇವಣಿ ಇಡುವ ಮೂಲಕ ಬ್ಯಾಂಕಿನ ಹಾಗೂ ಷೇರುದಾರರ ವಹಿವಾಟಿನ ವೃದ್ದಿಗೆ ಮುಂದಾಗಬೇಕೆಂದರು
ಒಂದು ಸಾವಿರ ಮುಖ ಬೆಲೆಯ ಷೇರುದಾರರು 6,804 ಮಂದಿ ಇದ್ದು, 500 ಮುಖಬೆಲೆಯ 1,878 ಷೇರುಗಳು ಇದ್ದು 500 ಮುಖ ಬೆಲೆಗಿಂತ ಕಡಿಮೆ ಇರುವ ಷೇರುದಾರರು 3,476 ರಷ್ಠು ಇದ್ದು, ನೂತನ ಸಾಲಿಗೆ 294 ಹೊಸ ಸದಸ್ಯರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ ಷೇರು ಬಂಡವಾಳ ರೂ 136.29 ಲಕ್ಷ ರೂಗಳಾವೆ ಎಂದರು
ಈ ಸಾಲಿನ ಅಂತ್ಯಕ್ಕೆ 7.5 ಕೋಟಿ ರೂ. ಬರಲು ಬಾಕಿ ಇದ್ದು, ಈ ಸಾಲಿನಲ್ಲಿ 57.5 ಲಕ್ಷ ರೂ ಸಾಲ ವಿತರಣೆ ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಾಲ ವಸೂಲಿ ಬೇಡ ; ಆಗ್ರಹ
ರಾಜ್ಯ ಸರ್ಕಾರ ಬರ ಘೊಷಣೆ ಮಾಡಿರುವ ಹಿನ್ನಲೆಯಲ್ಲಿ ಪಿ ಕಾರ್ಡ್ ಬ್ಯಾಂಕ್ ನೀಡಿರುವ ಸಾಲದ ವಸೂಲಿ ನಿಲ್ಲಿಸಬೇಕು ಮತ್ತು ಬಡ್ಡಿ ವಿಧಿಸುವುದನ್ನ ತಡೆಯಬೇಕು ಎಂದು ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಇದೆ ವೇಳೆ ಕೃಷ್ಣೇಗೌಡ ಆಗ್ರಹಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸವಿತಾ, ಮಾಜಿ ಅಧ್ಯಕ್ಷರಾದ ನ.ಲಿ.ಕೃಷ್ಣ, ಮುತ್ತುರಾಜ್, ಸಿದ್ದಮರಿ, ಉಪಾಧ್ಯಕ್ಷರಾದ ಸಿದ್ದರಾಮು, ಈರೇಗೌಡ, ನಿರ್ದೆಶಕರಾದ ಮಧು, ದಾಸ ನಾಯಕ, ಮಹದೇವಯ್ಯ, ಸಿದ್ದೇಗೌಡ, ತರಿಕೆರೆ ರಾಜು ಗೌರಮ್ಮ, ಕೃಷ್ಣಪ್ಪ, ಪ್ರಭಾರ ವ್ಯವಸ್ಥಾಪಕಿ ಭಾಗ್ಯ ಹಾಜರಿದ್ದರು.




