ವರದಿ: ನ.ಲಿ.ಕೃಷ್ಣ
ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಮತ್ತು ತತ್ಸಂಬಂಧಿತ ಚಟುವಟಿಕೆಗೆ ನೆರವು ನೀಡುತ್ತಾ ಬಂದಿರುವ ಪಿಕಾರ್ಡ್ ಬ್ಯಾಂಕ್ ನಲ್ಲಿ ಅರ್ಥವಂತಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದು ಭಾರತಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪುಟ್ಟಲಿಂಗಯ್ಯ ಶ್ಲಾಘಿಸಿದರು.

ಮದ್ದೂರಿನ ಪಿಕಾರ್ಡ್ ಬ್ಯಾಂಕಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಎಪ್ಪತ್ತೇಳನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ರಾಜಕಾರಣ ಸಾಗುತ್ತಿರುವ ಹಾದಿ ಆತಂಕ ಹುಟ್ಟಿಸುತ್ತಿದೆ, ದೇಶದ ಭವಿಷ್ಯದ ಬದಲಾಗಿ ವೈಯಕ್ತಿಕ ಭವಿಷ್ಯ ಮತ್ತು ಬದುಕಿನ ಸುಧಾರಣೆಗಾಗಿ ಹಂಬಲಿಸುತ್ತಿದ್ದಾರೆ, ಇದು ಸಲ್ಲದು ಹಿರಿಯರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯ ದ ಉಳಿವು ಹಾಗೂ ದೇಶದ ಅಭಿವೃದ್ಧಿ ಗೆ ರಾಜಕಾರಣಿಗಳು ಶ್ರಮಿಸಬೇಕೆಂದರು.

ನಿವೃತ್ತ ಪಾಂಶುಪಾಲ ಕೃಷ್ಣೇಗೌಡ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಹಿಂದೆ ಇರುವ ಅಭಿಮಾನ, ಬದ್ದತೆ, ದೊಡ್ಡದು. ಆ ನಿಟ್ಟಿನಲ್ಲಿ ಪಿಕಾರ್ಡ್ ಬ್ಯಾಂಕ್ ನಲ್ಲಿ ಆಚರಣೆ ಮಾಡುತಿರುವ ಸ್ವಾತಂತ್ರ್ಯ ದಿನಾಚರಣೆ ಆರ್ಥಪೂರ್ಣವಾದದ್ದು, ಹಳ್ಳಿಯಿಂದ ದಿಲ್ಲಿಯವರೆಗೆ ಸ್ವಾತಂತ್ರ್ಯ ದಿನಾಚರಣೆ ಅಭಿಮಾನದಿಂದ ವ್ಯಾಪಕವಾಗಿ ಆಚರಿಸಲ್ಪಡಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪೇಗೌಡ ಮಾತನಾಡಿ, ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ಹಿರಿಯರ ತ್ಯಾಗ ಬಲಿದಾನದ ಫಲ ಈ ಫಲ ಅನುಭವಿಸುತ್ತಿದ್ದೇವೆ, ನಾವು ಮಹಾತ್ಮ ಗಾಂಧಿ ಸುಭಾಷ್ ಚಂದ್ರ ಬೋಸ್ ರ ನಾಯಕತ್ವದಲ್ಲಿ ಹೋರಾಡಿ ತ್ಯಾಗ ಬಲಿದಾನಗೈದವರ ಸ್ಮರಣೆಗೆ ಮತ್ತು ಸ್ವಾತಂತ್ರ್ಯ ದ ಉಳಿವಿನ ಬದ್ದತೆಗೆ ಕಟಿಬದ್ದರಾಗೋಣ ಎಂದರು.
ಇದೆ ವೇಳೆ ಪಿಕಾರ್ಡ್ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಸಿದ್ದಮರಿಯಪ್ಪ ನ.ಲಿ.ಕೃಷ್ಣ, ಮುತ್ತುರಾಜ್ ಉಪಾಧ್ಯಕ್ಷರಾದ ಸಿದ್ದರಾಮು, ಈರೇಗೌಡ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕರಾದ ಮಧು, ಕೃಷ್ಣಪ್ಪ, ಗೌರಮ್ಮ, ನಿವೃತ್ತ ಪ್ರಭಾರ ವ್ಯವಸ್ಥಾಪಕ ಶಿವಕುಮಾರ್, ಹಾಲಿ ವ್ಯವಸ್ಥಾಪಕರಾದ ಭಾಗ್ಯ ಷೇರುದಾರರಾದ ಅಜ್ಜಹಳ್ಳಿ ಕುಮಾರ್ ಹಾಗೂ ಆಶಾ, ಮೋಹನ, ಸುನಿಲ್, ಹುರುಗಲವಾಡಿ ರಾಮಯ್ಯ ಹಾಜರಿದ್ದರು




