ನಾಗಮಂಗಲ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಬಣದ ಎಸ್.ಟಿ ಗಿರಿಗೌಡ ಉರುಫ್ ಶಿಖರನಹಳ್ಳಿ ದೊರೆಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೊರೆಸ್ವಾಮಿ ಅವರಿಗೆ ಅಭಿಮಾನಿಗಳು ಮತ್ತು ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರು ಶುಭಕೋರಿದರು.

ರಾಜ್ಯ ಫೆಡರೇಷನ್ ನಿರ್ದೇಶಕ ತಿಮ್ಮರಾಯಿ ಗೌಡ ಮಾತನಾಡಿ, ನಮ್ಮ ನಾಯಕರಾದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಬೆಂಬಲಿತ ಅಭ್ಯರ್ಥಿ ದೊರೆಸ್ವಾಮಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ರೈತರಿಂದ ರೈತರಿಗೋಸ್ಕರ ಸ್ಥಾಪನೆಯಾದ ಈ ಸಂಘವು ಮುಂದಿನ ದಿನದಲ್ಲಿ ಉನ್ನತ ಮಟ್ಟಕ್ಕೆ ತಲುಪಲಿ, ರೈತರ ಅಭಿವೃದ್ಧಿಗಾಗಿ ಶ್ರಮಿಸಲಿ. ನೂತನ ಅಧ್ಯಕ್ಷರಿಗೆ ನಾನು ಸೇರಿದಂತೆ ನಮ್ಮೆಲ್ಲ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಸಹಕಾರ ಎಂದಿನಂತೆ ಇರಲಿದೆ ಎಂದು ತಿಳಿಸಿದರು
ನೂತನ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ನಮ್ಮ ನಾಯಕರಾದ ಚಲುವರಾಯಸ್ವಾಮಿ ಅವರು ಮತ್ತು ಪಿ ಎಲ್ ಡಿ ಬ್ಯಾಂಕಿನ ಎಲ್ಲ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ನೀಡಿದ್ದಾರೆ, ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಯಾವುದೇ ದಕ್ಕೆ ಬರದಂತೆ ನನ್ನ ಅಧಿಕಾರ ನಡೆಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರಾದ ಸತೀಶ್ ಚಂದ್ರ, ಲಕ್ಷ್ಮೀನಾರಾಯಣ, ತಮ್ಮಣ್ಣಗೌಡ, ಚೋಳೆನಹಳ್ಳಿ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಎಚ್ ಟಿ ಕೃಷ್ಣೆಗೌಡ, ತುರುಬನಹಳ್ಳಿ ರಾಜೇಗೌಡ, ಗಿರಿಗೌಡ ಹಾಗೂ ನೂರಾರು ಜನ ಅಭಿಮಾನಿಗಳು ಮತ್ತು ಪಿಎಲ್ಡಿ ಬ್ಯಾಂಕಿನ ನೌಕರರು ಉಪಸ್ಥಿತರಿದ್ದರು.




