Friday, November 20, 2026

ಪ್ರಾಯೋಗಿಕ ಆವೃತ್ತಿ

”ಅಂಬೇಡ್ಕರ್ ದಾರಿಯಲ್ಲಿ ಎಷ್ಟರ ಮಟ್ಟಿಗೆ ಸಾಗುತ್ತಿದ್ದೇವೆ ? ; ಆತ್ಮಾವಲೋಕನ ನಡೆಯಲಿ” : ನರೇಂದ್ರಸ್ವಾಮಿ

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಎಷ್ಟು ಮಟ್ಟಿಗೆ ನಡೆಯುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ವಿಧಾನ ಮಂಡಲ ಎಸ್ಸಿ,ಎಸ್ಟಿ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ ಮಂಡ್ಯ ವಿಭಾಗದ ವತಿಯಿಂದ ಮಂಡ್ಯನಗರದ ಕರ್ನಾಟಕ ಸಂಘದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಾಸ್ತವವಾಗಿ ನಾವು ಅಂಬೇಡ್ಕರ್ ಅವರನ್ನ ವಿಜೃಂಭಿಸುತ್ತಿದ್ದೇವೆಯೇ ಹೊರತು ಅವರ ಅನುಯಾಯಿಗಳಾಗಿ ಪರಿವರ್ತನೆಗೊಂಡಿಲ್ಲ, ವಿಶೇಷವಾಗಿ ಮೀಸಲಾತಿ, ಶಿಕ್ಷಣದ ಫಲಾನುಭವಿಗಳು, ನಮ್ಮ ಬದುಕನ್ನು ರಕ್ಷಣೆ ಮಾಡಬೇಕು ಎಂದರು.

ಎಸ್ಸಿ, ಎಸ್ಟಿ ನೌಕರರು ರೋಸ್ಟರ್ ವಿಚಾರವಾಗಿ, ಮೀಸಲಾತಿ, ಬಡ್ತಿ ವಿಚಾರವಾಗಿ ಹಲವರು ನನ್ನ ಬಳಿಗೆ ಬರ್‍ತಾರೆ, ಆದರೆ ತಮ್ಮೊಬ್ಬರಿಗೆ ಅನ್ಯಾಯವಾದಾಗ ನನ್ನ ಬಳಿಗೆ ಬರ್‍ತಾರೆಯೇ ಹೊರತು, ಆಯಾ ವಿಭಾಗದಲ್ಲಿ ಕುಳಿತು ಚರ್ಚಿಸಿ ತಮ್ಮ ಬಳಿಗೆ ಬರುವುದಿಲ್ಲ, ಫಲಾನುಭವಿಗಳಾದ ನಂತರ ತಮಗೆ ಬೇಕಾದ ಕೋಟೆ ಕಟ್ಟಿಕೊಂಡು ಅದರೊಂದಿಗೆ ಜೀವಿಸುವ ನೌಕರರು ಹೆಚ್ಚಾಗಿದ್ಧಾರೆ. ಅವರಿಗೆ ಅಂಬೇಡ್ಕರ್ ಅವರ ಬೇರು ಬೇಕಿಲ್ಲ, ದಾರಿಯೂ ಬೇಕಿಲ್ಲ ಎನ್ನುವಂತಿದ್ದಾರೆ. ಒಂದು ವೇಳೆ ಬಾಬಾ ಸಾಹೇಬರು ಹೀಗೆ ಯೋಚನೆ ಮಾಡಿದ್ದರೆ ನಾವೆಲ್ಲ ಎಲ್ಲಿ ಇರುತ್ತಿದ್ಧೇವು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಒಳಮೀಸಲಾತಿ ವಿಚಾರದಲ್ಲಿ ನಾವು ಭಾಗವಾಗಿದ್ಧೇವೆ, ಈಗ ಸಮೀಕ್ಷೆ ನಡೆಯುತ್ತಿದ್ದೇನೆ, ವರದಿ ಬಂದ ನಂತರ ಏನು ? ಭಾಗ ಪಡೆಯುತ್ತೇವೆ, ಇಂತಹ ಪರಿಸ್ಥಿತಿಯಲ್ಲಿ ಬಾಬಾ ಸಾಹೇಬರ ಪೋಟೋ ಇಟ್ಟುಕೊಂಡು ಎಲ್ಲರೂ ನಾವು ತಪ್ಪು ಮಾಡುತ್ತಿದ್ದೇವೆಲ್ಲ, ಈ ಬಗ್ಗೆ ಆವಲೋಕನ ಮಾಡಬೇಕೆಂದರು.

ವೇದಿಕೆಯಲ್ಲಿ ಮುಖಂಡರಾದ ವಿಜಯಲಕ್ಷ್ಮಿ ರಘುನಂದರ್, ಎಂ.ವಿ.ಕೃಷ್ಣ, ತಾಳಶಾಸನ ಮೋಹನ್ ಹಾಗೂ ನಂಜುಂಡ ಮೌರ್ಯ ಸೇರಿದಂತೆ ಮತ್ತಿತರರು ಭಾಗವಹಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ