ಮಳವಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪಿ.ಎಂ.ನರೇಂದ್ರಸ್ವಾಮಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಪೇಟೆ ಒಕ್ಕಲಗೇರಿ ಯುವಕರು ಈಡುಗಾಯಿಗಳನ್ನು ಒಡೆಯುವ ಮೂಲಕ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವೀರೇಶ್ ಮಾತನಾಡಿ, ಪಿ.ಎಂ ನರೇಂದ್ರಸ್ವಾಮಿ ಅವರು ಅಭೂತ ಪೂರ್ವ ಗೆಲುವು ಸಾಧಿಸಿದರೆ 101 ತೆಂಗಿನ ಕಾಯಿ ಒಡೆಯುವುದಾಗಿ ಹರಕೆ ಒತ್ತಿದ್ದ ಕಾರಣ ಹರಕೆ ತೀರಿಸಿದವು, ಇನ್ನು ಮುಂದೆ ನಮ್ಮ ಶಾಸಕರು ಉತ್ತಮವಾದ ಆಡಳಿತ ಮತ್ತು ಅಭಿವೃದ್ಧಿ ಮಾಡಲಿ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆಯಲ್ಲಿ ಬಸವರಾಜು, ಮಹದೇವು, ಬೇಬಿ ಬಸವರಾಜು, ಗುಂಡಪ್ಪ, ಕೃಷ್ಣ, ಸ್ವಾಮಿ, ಸತೀಶ್, ದುರ್ಗಾ, ಸತ್ಯ, ನಾಗೇಂದ್ರ, ಸಿದ್ದರಾಜು ಸೇರಿದಂತೆ ಇತರರಿದ್ದರು.




