Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಕ್ರಮ ಮದ್ಯ – ಗಾಂಜಾ‌ ವಶ: ಐವರ ಬಂಧನ

ನಿಖರ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಮಂಡ್ಯ ಪೊಲೀಸರು ಅಕ್ರಮವಾಗಿ ಮದ್ಯ ಮತ್ತು ಗಾಂಜಾ ಮಾರುತ್ತಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 4,092 ಕೆ.ಜಿ ತೂಕದ ಗಾಂಜಾ ಮತ್ತು 1,53,459 ರೂ.ಮೌಲ್ಯದ 264.66 ಲೀಟರ್ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದಾರೆ.

ಮಂಡ್ಯ ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜಾಯ್ ಅಂತೋಣಿ, ಮಂಡ್ಯ ಪಶ್ಚಿಮ ಠಾಣೆ ಸಿಪಿಐ ವಿ. ನವೀನ್ ಸುಪೇಕರ್ ನೇತೃತ್ವದಲ್ಲಿ ಮಂಡ್ಯ ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಶೇಷಾದ್ರಿಕುಮಾರ್ ಎಸ್.ಜಿ ಅವರ ತಂಡ ಖಚಿತ ಮಾಹಿತಿ ಮೇರೆಗೆ ಅಂಗಡಿ, ಮನೆ, ಹೊಟೆಲ್‌ನ ಮೇಲೆ ದಾಳಿ ಮಾಡಿ 4 ಪ್ರಕರಣಗಳನ್ನು ದಾಖಲು ಮಾಡಿ, 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಅರುಣ್‌ ಕುಮಾರ್, ಅಶೋಕ್, ಸಿದ್ದರಾಜು ಸೇರಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ಸುಮಾರು ಎರಡು ಲಕ್ಷ ರೂ. ಬೆಲೆ ಬಾಳುವ 4092 ಕೆ.ಜಿ ಗಾಂಜಾ ಮತ್ತು ಸುಮಾರು ,28 ಸಾವಿರ ಮೌಲ್ಯದ 61.20 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ ನಗರದ ಮಾರುತಿ ನಗರದಲ್ಲಿ ವಾಸವಾಗಿದ್ದ ಮಹಿಳಾ ಆರೋಪಿಯನ್ನು ವಶಕ್ಕೆ ಪಡೆದು ಆಕೆಯಿಂದ ಸುಮಾರು 22,859 ರೂ ಬೆಲೆ ಬಾಳುವ 48.60 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮಂಡ್ಯದ ಮಾರುತಿ ನಗರ ವಾಸಿ ಮತ್ತೋರ್ವ ಮಹಿಳಾ ಆರೋಪಿಯಿಂದ ಸುಮಾರು 42,170 ರೂ ಬೆಲೆ ಬಾಳುವ 94.860 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆ ಮತ ಎಣಿಕೆ ಸಂಬಂಧ ಮದ್ಯ ಮಾರಾಟ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಮಂಡ್ಯದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಮದ್ಯ ಶೇಖರಣೆ ಮಾಡಿ, ಕಲಬೆರೆಕೆ ಮಾಡಿ ಬೇರೆ ಬೇರೆ ಕಡೆ ಮದ್ಯ ಸರಬರಾಜು ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಹೋಟೆಲ್‌ನ ಮೇಲೆ ದಾಳಿ ಮಾಡಿ ಸುಮಾರು 60,000 ರೂ ಬೆಲೆಯ ಸುಮಾರು 60 ಲೀಟರ್ ಮದ್ಯವನ್ನು ವಶಪಡಿಸಿಕೊಂಡು 03 ಜನ ಆರೋಪಿಗಳ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ