Friday, November 20, 2026

ಪ್ರಾಯೋಗಿಕ ಆವೃತ್ತಿ

ಪ್ರೇಮಕ್ಕಿದು ಕಾಲ ವಿಲ್ಲ ಎಂದವರಿಗೆ…..

-ದೇವರಾಜ್ ಹುಣಸಿಕಟ್ಟಿ

ಭೂಮಿಯ ಕೂಡುವ ಬಯಕೆಯಲ್ಲಿ ದಿನವೂ ಸಂಜೆ
ಸಮುದ್ರದಲ್ಲಿ ಮುಳುಗುವ ಸೂರ್ಯನ ಕೇಳಿ ನೋಡಿ….

ಖಾತರಿ ಇಲ್ಲವೇ? ಸರಿ

ಅವಳ ಆಸೆ ಪಡುತ್ತಲೇ
ದಿನವೂ ತನ್ನ ತಾನ ಇಂಚಿಂಚು
ಕೊಂದು ಕೊಳ್ಳುವ ಚೆಲುವ
ಹುಣ್ಣಿಮೆಯ ಮರುದಿನದ ಚಂದಿರನ ನೋಡಿ…

ಇನ್ನೂ ಖಾತರಿ ಆಗಲಿಲ್ಲವೇ..

ಇಳೆ ಎಂಬ ಸುಂದರಿಯ
ಹಗಲಲ್ಲ ಸೇರಲಾಗದೆ
ಅವಳ ಒಂದು ಕಿರು ನಗೆಗಾಗಿ
ಸರಿ ರಾತ್ರಿ ಉದುರಿ ಬೀಳುವ
ನಕ್ಷತ್ರಗಳ ಒಮ್ಮೆ ಮಾತನಾಡಿಸಿ…

ಪ್ರೀತಿಯ ನಾಡಿ ಮಿಡಿತ..
ನಿಮ್ಮ ಸ್ಟೇತ್ ಸ್ಕೋಪ್ ಗೆ
ಸಿಗಲುಂಟೆ..?

ಈ ಮೋಡದ ಆಸೆಯಂತೂ
ಸದಾ ಜಗತ್ ಜಾಹಿರು..
ಭುವಿಗೆ ಕಣ್ಣೊಡೆಯಲೆಂದೆ
ಮಿಂಚು ಸೃಷ್ಟಿಸಿಕೊಂಡಿರುವ…
ತೀರಾ ಪೋಲಿ ಪ್ರೇಮಿ ಅವ್ಹ್…
ಸದಾ ಹದಿನಾರರ ಹರೆಯದ ಹುಡುಗ…

ಇನ್ನು ದಿನವೂ ಸದ್ದಿಲ್ಲದೇ
ಮುಂಜಾನೆ ಅವಳ ಅಪ್ಪಿಕೊಳ್ಳುವ..
ಹನಿ ಇಬ್ಬನಿದು ಅಮರ ಪ್ರೇಮ.. ಸದಾ ತುಟಿಗೆ ತುಟಿ ಕೊಟ್ಟು ಚುಂಬಿಸುವ ಅವಕಾಶ
ಅವನಿಗೆ ಮಾತ್ರ…

ಕ್ಷಮಿಸಿ ಬಿಡಿ ಗೆಳೆಯರೇ..
ರವಿ ಚಂದ್ರ ತಾರೆಗಳೇ
ನಿಮ್ಮ ಟಾರ ರೋಡಿನಲ್ಲಿ
ನಡೆವಳಲ್ಲ ಭುವಿ..
ಅವಳು ಸದಾ ಎದೆಗೆ ಎದೆ ಕೊಟ್ಟು
ತಲೆ ಒರಗಿಸುವ ತೀರಾ ಸೀದಾ ಸಾದಾ ಹೆಣ್ಣುಮಗಳು..
ಎಂದು ಮೂದಲಿಸಿದನು…
ಇಬ್ಬನಿ ಎಂಬ ಅಮರ ಪ್ರೇಮಿ…. ಅಷ್ಟೇ…

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ