Friday, November 20, 2026

ಪ್ರಾಯೋಗಿಕ ಆವೃತ್ತಿ

ಕೇಂದ್ರ ಸರ್ಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಾಣುತ್ತಿದೆ: ಪ್ರಿಯಾಂಕ್ ಖರ್ಗೆ ಕಿಡಿ

ರಾಜ್ಯದ ರೈತರು ಬರದಿಂದ ಕಂಗಾಲಾಗಿದ್ದಾರೆ, ಇಂತಹ ಪ್ರಾಕೃತಿಕ ಸವಾಲುಗಳು ಎದುರಾದಾಗಲೆಲ್ಲ ಕೇಂದ್ರ ಸರ್ಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಂಡಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ  ಅವರು ಹಲವು ಪತ್ರಗಳನ್ನು ಬರೆದರು ಕೇಂದ್ರದ ಸ್ಪಂದನೆ ಇಲ್ಲವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳು ಖುದ್ದು ಭೇಟಿಯಾಗಿ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪರಿಹಾರ ಇಲ್ಲ. ಕರ್ನಾಟಕ ಅಫಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿದ್ದಿದ್ದರೆ ಪ್ರಧಾನಿಗಳ ಮನ ಮಿಡಿಯುತ್ತಿತ್ತೋ ಏನೋ! ಏಕೆಂದರೆ ಅವರಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ! ರಾಜ್ಯದಲ್ಲಿ 25+1 ಬಿಜೆಪಿ ಸಂಸದರಿದ್ದಾರೆ, ಅವರಿಗೆ ಕನ್ನಡಿಗರ ಸ್ಥಿತಿಗತಿಯ ಬಗ್ಗೆ, ತಮ್ಮ ಹೊಣೆಗಾರಿಕೆಯ ಬಗ್ಗೆ ಕಿಂಚಿತ್ ಪ್ರಜ್ಞೆ ಇಲ್ಲ. ಸಂಸದ ಸ್ಥಾನವನ್ನು ಕೇವಲ “ಮೋದಿ ಭಜನಾ ಮಂಡಳಿಯ ಸದಸ್ಯತ್ವ” ಎಂದು ಪರಿಭಾವಿಸಿರುವಂತಿದೆ ಎಂದು ಅವರು ಲೇವಡಿ ಮಾಡಿದ್ದಾರೆ. 

“>

ಬಿಜೆಪಿ ಸಂಸದರಿಗೆ ಸಿದ್ದರಾಮಯ್ಯ ಏನ್ ಮಾಡ್ತಿದಾರೆ, ಡಿಕೆ ಶಿವಕುಮಾರ್ ಅವರ ಏನ್ ಮಾತಾಡ್ತಾರೆ ಎಂಬುದರ ಬಗ್ಗೆ ಇರುವ ಅರ್ಧದಷ್ಟು ಆಸಕ್ತಿ ಜನರ ಬಗ್ಗೆ ಇದ್ದಿದ್ದರೆ ಕನ್ನಡಿಗರಿಂದ ಪಡೆದ ಮತಕ್ಕೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಿದಂತಾಗುತ್ತಿತ್ತು. ಬರ ಪರಿಹಾರಕ್ಕಾಗಿ ಅಥವಾ ಇನ್ಯಾವುದೇ ರಾಜ್ಯದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಬಿಜೆಪಿ ಸಂಸದರು ನಿಯೋಗ ಮಾಡಿಕೊಂಡು ಹೋಗಿ ಕೇಂದ್ರ ಸರ್ಕಾರವನ್ನು ಗಮನ ಸೆಳೆದಿರುವ ಉದಾಹರಣೆ ಇಲ್ಲ. ಕನ್ನಡಿಗರ ಬೆನ್ನಿಗೆ ಇರಿದ ಚೂರಿಯಲ್ಲಿ ಅಂಟಿದ ರಕ್ತದ ಕಲೆಗಳನ್ನು ತೋರಿಸಿ ಮತ ಕೇಳುತ್ತದೆಯೇ ಬಿಜೆಪಿ? ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ