INDIA ಒಕ್ಕೂಟದ ನಾಯಕರು ಕೆಲ ಟಿವಿ ಕಾರ್ಯಕ್ರಮಗಳು ಮತ್ತು ನಿರೂಪಕರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕಲು ಸಮನ್ವಯ ಸಮಿತಿಯ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಈ ಕುರಿತು INDIA ಒಕ್ಕೂಟದ ಸಮನ್ವಯ ಸಮಿತಿಯು, ಮಾಧ್ಯಮ ಉಪ ಸಮಿತಿ ರಚಿಸಿದ್ದು ಸಮಿತಿ ಬಹಿಷ್ಕಾರ ಹಾಕಬೇಕಾಗಿರುವ ನಿರೂಪಕರು ಮತ್ತು ಕಾರ್ಯಕ್ರಮಗಳ ಹೆಸರನ್ನು ಸಿದ್ಧಪಡಿಸಿದೆ.
ಅಮಾನ್ ಛೋಪ್ರಾ, ಪ್ರಾಚಿ ಪರಸಾರ್, ರುಬಿಕಾ ಲಿಯಾಕತ್, ಚೈತ್ರಾ ತೃಪ್ತಿ, ಸುದೀರ್ ಚೌದರಿ, ಅಮೀಶ್ ದೇವಗನ್, ಅರ್ನಬ್ ಗೋಸ್ವಾಮಿ, ನವಿಕಾ ಕುಮಾರ್, ಆನಂದ ನರಸಿಂಹನ್, ಗೌರವ್ ಸಾವಂತ್, ಅದಿತಿ ತ್ಯಾಗಿ, ಸುಶಾಂತ್ ಸಿನ್ಹಾ, ಅಶೋಕ್ ಶ್ರೀವತ್ಸವ್, ಶಿವ್ ಅರೂರ್ ಅವರ ಕಾರ್ಯಕ್ರಮ ಬಹಿಷ್ಕಾರಕ್ಕೆ ಮಾಧ್ಯಮ ಉಪ ಸಮಿತಿ ತೀರ್ಮಾನಿಸಿದೆ.
The following decision was taken by the INDIA media committee in a virtual meeting held this afternoon. #JudegaBharatJeetegaIndia #जुड़ेगा_भारत_जीतेगा_इण्डिया pic.twitter.com/561bteyyti
— Pawan Khera 🇮🇳 (@Pawankhera) September 14, 2023
“>
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮನೆಯಲ್ಲಿ ನಡೆದ INDIA ಒಕ್ಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ ಕೆಲ ಟಿವಿ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕುವ ಸಲುವಾಗಿ ಆಂಕರ್‌ಗಳು ಮತ್ತು ಕಾರ್ಯಕ್ರಮಗಳನ್ನು ಪಟ್ಟಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮದ ಒಂದು ವಿಭಾಗವು ಕಡಿಮೆ ಕವರೇಜ್ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಯಾತ್ರೆಗೆ ಜನ ಬೆಂಬಲ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಯಾತ್ರೆಗೆ ಹೆಚ್ಚು ಬೆಂಬಲ ನೀಡಲಾಗಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ರಾಹುಲ್ ಯಾತ್ರೆಯನ್ನು ಬಹಿಷ್ಕರಿಸುವುದನ್ನು ಮುಂದುವರೆಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರು.
ಸಂಪಾದಕರು ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ ಎಂಬುದು ನನ್ನ ಆರೋಪ. ಲಕ್ಷಗಟ್ಟಲೆ ಜನ ಯಾತ್ರೆಗೆ ಸೇರಿದ್ದಾರೆ. ಇಷ್ಟು ದೊಡ್ಡ ಯಾತ್ರೆಯನ್ನು ನೀವು ತೋರಿಸುವುದಿಲ್ಲವೇ? ಎಂದು ರಾಜಸ್ಥಾನ ಮುಖ್ಯಮಂತ್ರಿ ಪ್ರಶ್ನಿಸಿದ್ದರು.




