Friday, October 11, 2024

ಪ್ರಾಯೋಗಿಕ ಆವೃತ್ತಿ

ಗಗನಚುಕ್ಕಿ ಜಲಪಾತೋತ್ಸವ ವಿರೋಧ; ಸೆ.14ಕ್ಕೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ- ಅನ್ನದಾನಿ

ಮಳವಳ್ಳಿ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸದೇ ಮೋಜು ಮಸ್ತಿಗಾಗಿ ಗಗನಚುಕ್ಕಿ ಜಲಪಾತೋತ್ಸವ ನಡೆಸುತ್ತಿರುವುದನ್ನು ವಿರೋಧಿಸಿ ಸೆ.14ರಂದು ಬಿಜೆಪಿ-ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಅನ್ನದಾನಿ ತಿಳಿಸಿದರು.

ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳವಳ್ಳಿ ತಾಲೂಕಿನ ರೈತರ ಕಷ್ಟ ಕೇಳದೇ, ಜಲಪಾತೋತ್ಸವ ನಡೆಸಲಾಗುತಿದೆ, ಕೆರೆಕಟ್ಟೆಗಳು ತುಂಬದೇ ಇದ್ದರೆ ಪ್ರತಿಭಟನೆ ಮಾಡುವುದು ಖಚಿತ ಅಂತ ಈ ಹಿಂದೆಯೇ ಹೇಳಿದ್ದೆ, ಅದರಂತೆ ಸಿಎಂ ಸಿದ್ದರಾಮಯ್ಯ ಬರುವ ದಿನದಂದು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಜನಪ್ರತಿನಿಧಿಗಳು ಜನ ಸಾಮಾನ್ಯರ ಕಷ್ಟವನ್ನು ಆಲಿಸಬೇಕು, ಅದನ್ನು ಬಿಟ್ಟು ಉತ್ಸವ ನಡೆಸುವುದು ಎಷ್ಟು ಸರಿ, ಸೆ.14ರಂದು ಕಪ್ಪುಬಟ್ಟೆ ಧರಿಸಿ ನಾವು ಪ್ರತಿಭಟನೆ ನಡೆಸುತ್ತಿವೆ, ನಮ್ಮ ಪ್ರತಿಭಟನೆ ಸಿದ್ದರಾಮಯ್ಯ, ನರೇಂದ್ರಸ್ವಾಮಿ ವಿರುದ್ದವಲ್ಲ, ನಮ್ಮ ಸಮಸ್ಯೆಯನ್ನ ಮುಂದಿಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಶಾಸಕರ ಮೇಲಿನ ದ್ವೇ‍ಷಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿಲ್ಲ, ರೈತರ ಬದುಕನ್ನು ಹಸನು ಮಾಡಲು ಅವರು ಯೋಚನೆ ಮಾಡಬೇಕಿತ್ತು. ಪ್ರತಿಭಟನೆ ಮಾಡಿದರೆ ಮಾಡಿ ಕೊಳ್ಳಲಿ ಎಂಬ ಅಸಡ್ಡೆಯ ನುಡಿ ಬೇಡ, ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯೋಚಿಸಿ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಹನುಮಂತು, ಪುರಸಭೆ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಂದಕುಮಾರ್, ನಾಗೇಶ್ , ಪ್ರಶಾಂತ್, ರವಿ, ಕೃಷ್ಣ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!