Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಪ್ರಶ್ನೆ ಕೇಳುವ ಸಾಮರ್ಥ್ಯ ಹೆಚ್ಚಿಸಬೇಕು -ಡಾ.ಮೀರಾ ಶಿವಲಿಂಗಯ್ಯ

ಇಂದಿನ ವಿದ್ಯಾರ್ಥಿಗಳಲ್ಲಿ ವಾಸ್ತವಿಕ ವಿಜ್ಞಾನ- ತಂತ್ರಜ್ಞಾನ-ವೈಜ್ಞಾನಿಕ ವಿಷಯಗಳ ಪ್ರಶ್ನೆಕೇಳುವ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಹೇಳಿದರು.

ಮಂಡ್ಯ ನಗರದ ಮಾಂಡವ್ಯ ಜ್ಞಾನಸಾಗರ ಕ್ಯಾಂಪಸ್‌ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ಮಾಂಡವ್ಯ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಮಯದಲ್ಲಿ ನಡೆದ ಪರಿಸ್ಕೃತ ಭೌತಶಾಸ್ತ್ರ, ಪ್ರಶ್ನೆಪತ್ರಿಕೆ ವಿಶ್ಲೇಷಣಾ ನೀಲನಕ್ಷೆ ಕಾರ್ಯಾಗಾರ, ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಾಧುನಿಕ ಯುಗದಲ್ಲಿರುವ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆಯಲ್ಲಿ ತಲೀನರಾಗುತ್ತಿದ್ದಾರೆ, ಪೋಷಕರ ಮಾತುಗಳನ್ನು ತಿರಸ್ಕರಿಸುತ್ತಾರೆ, ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಮಾತುಗಳನ್ನು ಗಂಭೀರವಾಗಿ ಕೇಳುತ್ತಾರೆ, ವಿದ್ಯಾರ್ಥಿಗಳ ಬದಲಾವಣೆ ಉಪನ್ಯಾಸಕರ ಕೈಯ್ಯಲಿದೆ ಎಂದು ನುಡಿದರು.

\ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೊಸ ಬದಲಾವಣೆಯಾಗಿದೆ, ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಹೊಸ ರೂಪರೇಷ ನೆರವಾಗಲಿದೆ, ಪ್ರಶ್ನೆ ಪತ್ರಿಕಾ ವಿಶ್ಲೇಷಣಾ ನೀಲನಕ್ಷೆ, ಪಾಸ್ಸಿಂಗ್ ಅಂಕ ೩೫ರಿಂದ ೩೩ಕ್ಕೆ ಇಳಿಕೆಯಾಗಿರುವುದು

ಶೇ.೧೦೦ರಷ್ಟು ಆಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಎಲ್.ಕೃಷ್ಣೇಗೌಡ, ಪ್ರಾಂಶುಪಾಲ ಸಂಘದ ಅಧ್ಯಕ್ಷ ನಟರಾಜು, ಉಪನ್ಯಾಸಕರ ಸಂಘದ ಅಧ್ಯಕ್ಷ ಚನ್ನಕೃಷ್ಣಯ್ಯ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಗೌರಾಧ್ಯಕ್ಷ ಗುರುಲಿಂಗೇಗೌಡ, ರಾಜ್ಯಾಧ್ಯಕ್ಷ ಎಂ.ನಾರಾಯಣಪ್ಪ, ಕಾರ್ಯಾಧ್ಯಕ್ಷ ಎ.ರಾಮೇಗೌಡ, ರಾಜ್ಯ ಸಂಪನ್ಮೂಲ ವ್ಯಕ್ತಿ ಜಿ.ಮಹೇಶ್, ಜಿಲ್ಲಾಧ್ಯಕ್ಷ ಗಣೇಶ್‌ಕುಮಾರ್, ಗೌರವಾಧ್ಯಕ್ಷ ಎಂ.ಆರ್.ಮಂಜು ಮುತ್ತೆಗೆರೆ, ಕಾರ್ಯದರ್ಶಿ ವಿನಯ್‌ಕುಮಾರ್, ಖಜಾಂಚಿ ಅನಿಲ್‌ಕುಮಾರ್, ಪ್ರಾಂಶುಪಾಲ ಎಚ್.ಆರ್.ಶ್ರೀನಿವಾಸ್, ವಿಭಾಗದ ಮುಖ್ಯಸ್ಥ ಚೇತನ್‌ಕೃಷ್ಣ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ