Thursday, October 24, 2024

ಪ್ರಾಯೋಗಿಕ ಆವೃತ್ತಿ

NEET-UG ಪರೀಕ್ಷಾ ಅಕ್ರಮ| ಪ್ರಶ್ನೆಪತ್ರಿಕೆಗಳು ₹40 ಲಕ್ಷಕ್ಕೆ ಮಾರಾಟ; ನಾಲ್ವರು ಆರೋಪಿಗಳ ಬಂಧನ

NEET-UG ಪರೀಕ್ಷೆಯ ಅಕ್ರಮ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಲ್ಲಿ ನೀಟ್ ಅಭ್ಯರ್ಥಿ, ಆತನ ಚಿಕ್ಕಪ್ಪ ಸೇರಿದಂತೆ ಇಬ್ಬರು ಮಧ್ಯವರ್ತಿಗಳನ್ನು ಬಿಹಾರದಲ್ಲಿ ಬಂಧಿಸಲಾಗಿದೆ.

ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದ ಮಧ್ಯವರ್ತಿಗಳಾದ ನಿತೀಶ್ ಕುಮಾರ್, ಅಮಿತ್ ಆನಂದ್ ಹಾಗೂ ದಾನಪುರ ವೈದ್ಯಕೀಯ ಕಾಲೇಜಿನ ಜೂನಿಯರ್ ಇಂಜಿನಿಯರ್ ಆಗಿರುವ ಸಿಕಂದರ್ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈ ಆರೋಪಿಗಳು ಮೇ 4 ರ ಪರೀಕ್ಷೆಯ ಹಿಂದಿನ ದಿನ ಪೇಪರ್ ಸೋರಿಕೆ ಮಾಡಿ, ಪ್ರಶ್ನೆ ಪತ್ರಿಕೆಯನ್ನು 40 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ಧಾರೆಂದು ಆಘಾತಕಾರಿ ವಿಚಾರ ತಿಳಿದು ಬಂದಿದೆ.

ಮಧ್ಯವರ್ತಿಗಳಾದ ನಿತೀಶ್ ಕುಮಾರ್, ಅಮಿತ್ ಆನಂದ್ ದಾನಪುರ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಸಿಕಂದರ್ ಯಾದವೆಂದು ಅಭ್ಯರ್ಥಿಗಳೊಂದಿಗೆ ಸ್ನೇಹ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಯಾದವೆಂದು ಅವರ ಸೋದರಳಿಯ ಅನುರಾಗ್ ಯಾದವ್ ಮತ್ತು ಇತರ ಮೂವರು ವಿದ್ಯಾರ್ಥಿಗಳು ನೀಟ್-ಯುಜಿ ಪೇಪರ್ ಪಡೆಯಲು ಹಣವನ್ನು ಪಾವತಿಸಿದ್ದರು ಎಂದು ತಿಳಿದು ಬಂದಿದೆ.

ಕೃಪೆ: ಮನಿ ಕಂಟ್ರೋಲ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!