Monday, November 23, 2026

ಪ್ರಾಯೋಗಿಕ ಆವೃತ್ತಿ

ಛಲವಾದಿ ನಾರಾಯಣಸ್ವಾಮಿಯನ್ನು ದೂರತಳ್ಳಿದ ಆರ್.ಅಶೋಕ್ : ವಿಡಿಯೋ ಹಂಚಿಕೊಂಡ ಕಾಂಗ್ರೆಸ್

ದಲಿತರ ಬಗ್ಗೆ ಬಿಜೆಪಿ ನಾಯಕರು ಎಷ್ಟೇ ನಾಟಕೀಯ ಕಾಳಜಿ ತೋರಿದರು, ದಲಿತರ ಬಗ್ಗೆ ಅವರಿಗಿರುವ ಅಸಹನೆ, ಅಸೂಯೆ, ದ್ವೇಷ ತಾನಾಗಿಯೇ ಹೊರಬರುತ್ತದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ.

“>&nbsp

;

ಧಾರವಾಡದಲ್ಲಿ ಯುವಕರ ಪ್ರತಿಭಟನೆಯಲ್ಲಿ ಪ್ರಚಾರ ಪಡೆಯಲು ಹೋಗಿ ಛೀಮಾರಿ ಹಾಕಿಸಿಕೊಂಡಿದ್ದು ಸಾಲದೇ, ಕ್ಯಾಮೆರಾಗಳ ಮುಂದೆ ಪೋಸ್ ಕೊಡಲು ಹೋದ ನಾರಾಯಣಸ್ವಾಮಿಯನ್ನು ಆರ್.ಅಶೋಕ್ ಅವರನ್ನು ದೂರ ತಳ್ಳಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. 

ಧಾರವಾಡದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ದಾರಿಯುದ್ಧಕ್ಕೂ ಮೊಣಕೈನಲ್ಲಿ ದೂರ ತಳ್ಳುತ್ತಲೇ ಇದ್ದರು. ಆದರೆ ತಮ್ಮ ಎಡಗಡೆ ಇದ್ದ ಅರವಿಂದ ಬೆಲ್ಲದ್ ಅವರನ್ನು ಹತ್ತಿರ ಬಿಟ್ಟುಕೊಂಡಂತೆ, ನಾರಾಯಣಸ್ವಾಮಿ ಅವರನ್ನು ಹತ್ತಿರ ಬಿಟ್ಟುಕೊಳ್ಳಲು ಅವರ ನೀಚ ಮನಸ್ಥಿತಿ ಒಪ್ಪದಿರುವುದು ಎದ್ದು ಕಾಣುತ್ತಿತ್ತು ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ