ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಹಾನಿಗೊಳಗಾಗಿದೆ. ರಾತ್ರಿಯಿಡೀ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ಗ್ರಾಮದ ನಂಜಮ್ಮ ಎಂಬುವರ ಮನೆ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾನಿಯಾಗಿತ್ತು.
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ಚಂದಗಾಲು ಗ್ರಾಮದ ನಂಜಮ್ಮ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳುವ ಜೊತೆಗೆ ಪರಿಹಾರ ವಿತರಿಸಿದರು.
ಈ ವೇಳೆ ಸ್ಥಳದಲ್ಲೇ ತಹಶೀಲ್ದಾರ್‌ಗೆ ದೂರವಾಣಿ ಕರೆ ಮಾಡಿದ ಅವರು ನಂಜಮ್ಮ ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ತಕ್ಷಣ ದೊರಕಿಸಿಕೊಡುವಂತೆ ಮನವಿ ಮಾಡಿದರು. ನಂತರ ಗ್ರಾಮದಲ್ಲಿ ಅಕಾಲಿಕವಾಗಿ ಮರಣ ಹೊಂದಿದ್ದ ಗುಡ್ಡಯ್ಯರವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ವಿತರಿಸಿದರು.
ಬಳಿಕ ಶ್ರೀ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಂದಗಾಲು ಗ್ರಾಮದ ಮನೆ ಮನೆಗೂ ಕುಡಿಯುವ ನೀರು ಶೇಖರಿಸಿಡುವ 25ಲೀ ಕ್ಯಾನ್ ವಿತರಿಸಿದರು.
ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಶ್ರೀಧರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪುಟ್ಟರಾಜು, ಗ್ರಾಮದ ಮುಖಂಡರಾದಶ್ರೀನಿವಾಸ್, ಕೃಷ್ಣಪ್ಪ, ರಾಮಚಂದ್ರ, ರಾಮಕೃಷ್ಣ, ನಾರಾಯಣಪ್ಪ, ಗ್ರಾ. ಪಂ ಸದಸ್ಯರಾದ ರುಕ್ಮಿಣಿ ಶಿವಕುಮಾರ್, ಚಂದ್ರಕಲಾ ಶೇಖರ್, ಬಿಜೆಪಿ ಮುಖಂಡರಾದ ಆರ್. ಶ್ರೀನಿವಾಸ್, ಜ್ಞಾನೇಶ್, ಮಹೇಶ್, ಶಂಕರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಡಿ. ಶಿವಕುಮಾರ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.