Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಡಿಸೆಂಬರ್ ಅಂತ್ಯದ ವೇಳೆಗೆ ರೈತರ ಶಾಲೆ ಉದ್ಘಾಟನೆ : ಪ್ರೊ. ಸತ್ಯಮೂರ್ತಿ

ಮಂಡ್ಯ ತಾಲೂಕು ಆಲಕೆರೆ ಗ್ರಾಮದಲ್ಲಿ ಅಕ್ಟೋಬರ್ 20 2024 ರಂದು ರೈತರಿಂದ ರೈತರಿಗಾಗಿ ಶಂಕುಸ್ಥಾಪನೆಗೊಂಡು ಆರಂಭವಾಗಿರುವ ದೇಶದ ಮೊದಲ ರೈತರ ಶಾಲೆ.

ಈ ರೈತರ ಶಾಲೆಯು ಡಿಸೆಂಬರ್ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ  ಎಂದು ರೈತರ ಶಾಲೆಯ ಮುಖ್ಯಸ್ಥ ಪ್ರೊ.ಸತ್ಯಮೂರ್ತಿ ತಿಳಿಸಿದರು. ಮಂಗಳವಾರ ರೈತರ ಶಾಲೆಯ ವತಿಯಿಂದ ನಡೆದ  ರೈತರ ಶಾಲೆಯ ಪೋಸ್ಟರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಲಸೆಯನ್ನು ತಡೆಗಟ್ಟಲು ಮತ್ತು ಯುವಕರು ತಮ್ಮ ಗ್ರಾಮಗಳಲ್ಲಿ ಉಳಿಯಲು ಮತ್ತು ಕೃಷಿಯನ್ನು ಮುಂದುವರಿಸಲು ನಾವು ಹಳ್ಳಿಗಳನ್ನು ಪುನರ್ನಿರ್ಮಿಸಲು ಶ್ರಮಿಸಬೇಕು ಎನ್ನುವುದು ರೈತರ ಶಾಲೆಯ ಮುಖ್ಯ ಧೈಯೋದ್ಧೇಶವಾಗಿದೆ.

ನಗರಗಳಿಗೆ ವಲಸೆ ಹೋಗಿ, ಕಡಿಮೆ ವೇತನ ಮತ್ತು ಸ್ವಾಭಿಮಾನವಿಲ್ಲದ ವೃತ್ತಿಗಿಂತ, ಕೃಷಿಯನ್ನು ವೃತ್ತಿಯಾಗಿ ಮತ್ತು ಗ್ರಾಮೀಣ ಜೀವನದ ಅಸ್ತಿತ್ವವನ್ನು ಕಾಪಾಡಲು ಉತ್ತಮ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ರೈತರ ಶಾಲೆಯನ್ನು ಆರಂಭಿಸಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಸಂಪನ್ಮೂಲಗಳು ಖಾಲಿಯಾಗುತ್ತಿವೆ ಮತ್ತು  ಆಧುನಿಕ ರೈತರು ಪರಿಗಣಿಸಬೇಕಾದ ಪ್ರಾಥಮಿಕ ಕಾಳಜಿಗಳಲ್ಲಿ ಸಂಪನ್ಮೂಲ ಸವಕಳಿಯೂ ಒಂದು. ಕೃಷಿಭೂಮಿಯನ್ನು ಕೀಳಾಗಿಸುವಿಕೆ ಮತ್ತು ಕಡಿಮೆ ಮೌಲ್ಯೀಕರಿಸುವುದು, ಕೃಷಿಯಿಂದ ಸಂಪರ್ಕ ಕಡಿತಗೊಂಡ ಸಾರ್ವಜನಿಕರು,ಗ್ರಾಮೀಣ ಪ್ರದೇಶಗಳ ನಗರೀಕರಣ, ಮಣ್ಣಿನ ಸವೆತ, ಕಾರ್ಮಿಕರ ಕೊರತೆ, ಇನ್ಪುಟ್ ವೆಚ್ಚಗಳು ಸೇರಿದಂತೆ ರೈತರಿಗೆ ಹಲವಾರು ಸವಾಲುಗಳಿವೆ ಮತ್ತು  ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯಗಳು ಮತ್ತು ಕೃಷಿ ಸಂಬಂಧಿತ ಮಾಹಿತಿಯನನ್ನು ರೈತರಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ರೈತರ ಶಾಲೆ ಕಾರ್ಯನಿರ್ವಹಿಸಲಿದೆ ಎಂದು ನುಡಿ ಕರ್ನಾಟಕ.ಕಾಂ ನೊಂದಿಗೆ ಹಂಚಿಕೊಂಡರು.

www.nudikarnataka.com Raithara-Shale

ರೈತರ ಶಾಲೆಯ ಪೋಸ್ಟರ್ ಬಿಡುಗಡೆ : 
ಇದೇ ಸಂದರ್ಭದಲ್ಲಿ ಆಲಕೆರೆ ಗ್ರಾಮದ ಕೃಷಿಕ ರಾಜಣ್ಣ ಗ್ರಾಮದ ರೈತರೊಂದಿಗೆ ರೈತರ ಶಾಲೆಯ ಪೋಸ್ಟರ್ ಬಿಡುಗಡೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು,  ಜಿಲ್ಲೆಯ ಎಲ್ಲಾ ರೈತ ಬಾಂಧವರು ರೈತರ ಶಾಲೆಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ರೈತರ ಶಾಲೆಯ ಪೋಸ್ಟರ್ ಅನ್ನು ರೈತರೇ ಬಿಡುಗಡೆಗೊಳಿಸಿರುವುದು ವಿಶಿಷ್ಟವಾಗಿತ್ತು.

ಇದನ್ನು ಓದಿ : ಮಂಡ್ಯ| ಭಾರತದ ಮೊದಲ ರೈತರ ಶಾಲೆಗೆ ನಾಳೆ ಶಂಕುಸ್ಥಾಪನೆ

ಈ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಸಹ ಕಾರ್ಯದರ್ಶಿಯಾದ ಜಗದೀಶ್, ಆಲಕೆರೆ ಘಟಕದ ಅಧ್ಯಕ್ಷರಾದ ಕಾಫಿಪುಡಿ ಚಂದ್ರು. ಪ್ರದೀಪ್ ಕುಮಾರ್. ಮಂಜು. ಗ್ರಾಮದ ರೈತರಾದ ರಾಜಣ್ಣ.ಮಹದೇವ,  ಮಹೇಶ್, ಪೋತ್ತೆಗೌಡ, ಮಾದೇಶ್, ಪುಟ್ಟಸ್ವಾಮಿ, ಶಿವರಾಜ್ ಹಾಗೂ ಪಾಪಣ್ಣ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ