ದೇಶದ ಪವಿತ್ರಗ್ರಂಥ ಸಂವಿಧಾನವನ್ನು ರಕ್ಷಣೆ ಮಾಡುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆದಿರುವ ಸನಾತನಿ ವಕೀಲ ರಾಕೇಶ್ ಕಿಶೋರ್ ಹಾಗೂ ದೇಶದ್ರೋಹಿ ಕೃತ್ಯವನ್ನು ಪ್ರಶಂಸಿರುವ ನಿವೃತ ಪೋಲಿಸ್ ಅಧಿಕಾರಿ ಬಾಸ್ಕರ್ ರಾವ್ ರವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು, ಗಲ್ಲಿಗೇರಿಸುವಂತೆ ಒತ್ತಾಯಿಸಿ ಅವಕಾಶ ವಂಚಿತ ಶೋಷಿತ ಸಮುದಾಯಗಳ ವೇದಿಕೆ ಮಂಡ್ಯನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಸನಾತನಿ, ದೇಶದ್ರೋಹಿ, ಉಗ್ರಗಾಮಿ ಮನಸ್ಸಿನ ರಾಕೇಶ್ ಕಿಶೋರ್ ದೇಶದ್ರೋಹದ ಕೃತ್ಯವನ್ನು ಪ್ರಶಂಸಿಸುವ ಮೂಲಕ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ತಪ್ಪು ಸಂದೇಶವನ್ನು ಕೊಟ್ಟ ನಿವೃತ್ತ ಪೋಲಿಸ್ ಅಧಿಕಾರಿ ಭಾಸ್ಕರ್ ರಾವ್ಮತ್ತು ಕೃತ್ಯವೆಸಗಿದ ರಾಕೇರ್ಶ ಕಿಶೋರ್ ಇಬ್ಬರನ್ನೂ ಗಲಿಗೇರಿಸಬೇಕು, ಅಲ್ಲಿಯವರೆಗೆ ಭಾಸ್ಕರ್ ರಾವ್ ನನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ದೇಶದ ಜೀವಿಸುವ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು ಹಾಗೂ ಕಡ್ಡಾಯವಾಗಿ ಪಾಲಿಸಬೇಕು ಈ ಸಂವಿಧಾನವನ್ನು ಸುರಕ್ಷಿತವಾಗಿ ರಕ್ಷಣೆಮಾಡುವ ಮತ್ತು ಜಾರಿಗೆ ತರುವ ನ್ಯಾಯಾಂಗವು ಸರ್ವಶ್ರೇಷ್ಟವಾಗಿ ಕರ್ತವ್ಯ ನಿರ್ವಹಿಸುತ್ತಿದೆ, ನಮ್ಮ ನ್ಯಾಯಾಂಗದ ಬಗ್ಗೆ ಪ್ರಧಾನಮಂತ್ರಿ ಮುಖ್ಯಮಂತ್ರಿಗಳು, ಮಂತ್ರಿಗಳು, ರಾಜ್ಯಪಾಲರು ಆಗೆ ಪ್ರತಿಯೊಬ್ಬ ಪ್ರಜೆಯುಕೂಡ ಗೌರವಯುತವಾಗಿ ನಡೆದುಕೊಳ್ಳಬೇಕು ಅಗೌರವದಿಂದ ನಡೆದುಕೊಂಡರೆ ಅದು ದೇಶದ್ರೋಹವಾಗುತ್ತದೆ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಲ್.ಸಂದೇಶ್, ವೆಂಕಟಗಿರಿಯ್ಯ, ಗಂಗರಾಜ್, ನರಸಿಂಹಮೂರ್ತಿ, ನಗರಸಭಾ ಸದಸ್ಯ ಶ್ರೀಧರ್, ದೊಡ್ಡಯ್ಯ, ನಾರಾಯಣಸ್ವಾಮಿ, ಹುರುಗಲವಾಡಿ ರಾಮಯ್ಯ ಸೇರಿದಂತೆ ಮತ್ತಿತತರು ಭಾಗವಹಿಸಿದ್ದರು.




