ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಆಟೋ ಚಾಲಕರು ಮತ್ತು ಮಾಲೀಕರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಟೋ ಚಾಲಕ ವೆಂಟಕೇಶ್ ಅವರನ್ನು ನೇಮಕ ಮಾಡಲಾಗಿದೆ.
ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ ಜಯರಾಮ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯಾಧ್ಯಕ್ಷ ಹೆಚ್. ಶಿವರಾಮೇಗೌಡ ಅವರು ನೇಮಕ ಮಾಡಿ ಆದೇಶ ಮಾಡಿದ್ದು, ವೆಂಕಟೇಶ್ ಅವರು ವೇದಿಕೆಯ ಸಂಘಟನೆಯಲ್ಲಿ ತೊಡಗಿಕೊಂಡು, ಸಂಘಟನೆಯನ್ನು ಬಲವರ್ಧನೆ ಮಾಡಲು ಸೂಚಿಸಿದ್ದಾರೆ.




