ನಿರಂತರ ಒಂದು ತಿಂಗಳ ರಂಜಾನ್ ಉಪವಾಸದ ಅಂತ್ಯದ ದಿನವಾದ ಇಂದು ಮಂಡ್ಯನಗರದ ಮುಸಲ್ಮಾನ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸಲ್ಮಾನ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಭಾಗವಹಿಸಿ ಪಾರ್ಥನೆ ಸಲ್ಲಿಸಿ, ನಾಡಿನ ಸುಭಿಕ್ಷಕ್ಕಾಗಿ ಮೊರೆಯಿಟ್ಟರು.
ಇಂದು ಶುಭ್ರ ಬಟ್ಟೆಗಳನ್ನು ತೊಟ್ಟ ಮುಸಲ್ಮಾನ ಬಂಧುಗಳು ಈದ್ಗಾ ಮೈದಾನದಲ್ಲಿ ಸೇರಿ ಪರಸ್ಪರರು ಶುಭಾಶಯ ಕೋರುವ ಮೂಲಕ ಉಪವಾಸ ಅಂತ್ಯಗೊಳಿಸಿದರು.

ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಮುಸಲ್ಮಾನ ಬಾಂಧವರು, ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸದಲ್ಲಿ ತೊಡಗುತ್ತಾರೆ, ಆಹಾರ, ಪಾನೀಯ, ಧೂಮಪಾನ ಮತ್ತು ಇತರ ಲೌಕಿಕ ಆಸೆಗಳಿಂದ ದೂರವಿರುತ್ತಾರೆ. ಪ್ರತಿ ಸಂಜೆ ಸೂರ್ಯಾಸ್ತದ ನಂತರ ಇಫ್ತಾರ್ ಎಂಬ ಊಟದೊಂದಿಗೆ ಉಪವಾಸವನ್ನು ಮುರಿಯಲಾಗುತ್ತದೆ. ಹೀಗೆ ಸತತ ಒಂದು ತಿಂಗಳು ಹಗಲಿನ ವೇಳೆಯಲ್ಲಿ ಉಪವಾಸವಿದ್ದು ಮನಶುದ್ದಿಗೊಳಿಸಿಕೊಳ್ಳುವುದನ್ನು ರಂಜಾನ್ ಉಪವಾಸವೆಂದೇ ಕರೆಯಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ನಯೀಂ, ನಗರಸಭಾ ಸದಸ್ಯ ಜಾಕೀರ್ ಪಾಷ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




