Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಾತೃಭಾಷೆಯ ಬಗ್ಗೆ ಅಪಾರ ಅಭಿಮಾನವಿರಲಿ: ರವಿಕುಮಾರ್

ಆಟೋ ಚಾಲಕರಲ್ಲಿನ ಕನ್ನಡಾಭಿಮಾನದಿಂದ ಕನ್ನಡ ಭಾಷೆ ಉಳಿದಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕರ್ನಾಟಕ ಬಾರ್ ಸರ್ಕಲ್ ನಲ್ಲಿ ಜೈ ಕರ್ನಾಟಕ ಆಟೋ ನಿಲ್ದಾಣದ ಚಾಲಕರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಾತೃಭಾಷೆಯ ಬಗ್ಗೆ ಅಪಾರ ಅಭಿಮಾನ ಇರಿಸಿ ಕನ್ನಡ ಭಾಷೆಯ ಬಗ್ಗೆ ಸದಾ ಜಾಗೃತರಾಗಿರುವ ಆಟೋ ಚಾಲಕರು ಭಾಷೆ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಆದರೆ ಇವರು ಆರ್ಥಿಕ ಸಬಲತೆ ಕಾಣುತ್ತಿಲ್ಲ, ಭಾಷಾಭಿಮಾನದ ಜೊತೆ ವೈಯಕ್ತಿಕ ಜೀವನದಲ್ಲಿ ಸಕಲರಾಗಬೇಕು ಎಂದರು.

ಹೊರ ರಾಜ್ಯದಿಂದ ಬಂದವರು ಸಾಫ್ಟ್ ವೇರ್ ಇಂಜಿನಿಯರ್ ರಾಗಿದ್ದಾರೆ, ಕನ್ನಡ ನಾಡಿನ ಆಟೋ ಚಾಲಕರ ಮಕ್ಕಳು ಆಟೋ ಚಾಲನಾ ವೃತ್ತಿ ಆಯ್ಕೆ ಮಾಡಿಕೊಳ್ಳದೆ ಇಂಜಿನಿಯರ್, ವೈದ್ಯರು ಮತ್ತು ಉನ್ನತ ಮಟ್ಟದ ಅಧಿಕಾರಿಗಳಾಗ ಬೇಕೆಂದರು.

ಗೌರಿಶಂಕರ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತದ ವರೆಗೆ 5 ಕೋಟಿ ರೂ ವೆಚ್ಚದಲ್ಲಿ ಪಾದಾಚಾರಿ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ ಯುಳ್ಳ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಅದೇ ರೀತಿ ಕರ್ನಾಟಕ ಭಾರತದ ಜೈ ಕರ್ನಾಟಕ ಆಟೋ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಮಾಡಲು 1 ಲಕ್ಷ ರೂ ಅನುದಾನವನ್ನು ಈಗಲೇ ನೀಡಲಾಗುವು ಎಂದು ಹೇಳಿದರು.

ನೋಂದಣಿಯಾಗದ ಆಟೋ ಸಂಚಾರಕ್ಕೆ ಡಿ. 1 ರಿಂದ ನಿರ್ಬಂಧ ಹಾಕಲಾಗುವುದು, ಆಟೋ ಚಾಲಕರು ಈ ಬಗ್ಗೆ ಎಚ್ಚೆತ್ತು ನೊಂದಣಿ ಮಾಡಿಸಿ ಸಂಚಾರ ಮಾಡಬೇಕು ಇಲ್ಲದಿದ್ದರೆ ಪೊಲೀಸರು ಕ್ರಮ ವಹಿಸಲಿದ್ದಾರೆ ಎಂದರು.

ಆಟೋ ಚಾಲನಾ ವೃತ್ತಿಯಲ್ಲಿ ಹೆಚ್ಚು ಆದಾಯಗಳಿಸುವ ರೀತಿ ಸೌಲಭ್ಯ ಕಲ್ಪಿಸಬೇಕು ಅದಕ್ಕೆ ಬದ್ಧನಾಗಿದ್ದು, ಚಾಲಕರು ಸಹ ಕಾನೂನು ಪಾಲಿಸುವ ಮೂಲಕ ವೃತ್ತಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.

ವಕೀಲ ಜೆ ರಾಮಯ್ಯ, ನಗರಸಭೆ ಸದಸ್ಯ ನಹಿಂ ಖಾನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಕಾಂಗ್ರೆಸ್ ಮುಖಂಡ ಜಬಿ ಉಲ್ಲಾ, ಯುವ ಮುಖಂಡ ಕಾರ್ತಿಕ್ ಗೌಡ, ಲೋಕೇಶ್, ಶೈಲೇಂದ್ರಕಾಂತ ರಾಜು,ಜೈ ಕರ್ನಾಟಕ ಆಟೋ ಸಂಘದ ರಾಬರ್ಟ್,ಯತೀಶ್ ಇತರರಿದ್ದರು, ಆದರ್ಶ ಶಾಲೆಯ ದೈಹಿಕ ಶಿಕ್ಷಕಿ ಕೆಲಿಟಾ ಸ್ವಾಗತಿಸಿ, ವಂದಿಸಿದರು,

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ