Thursday, November 19, 2026

ಪ್ರಾಯೋಗಿಕ ಆವೃತ್ತಿ

ಶೋಷಣೆ ವಿರುದ್ದ ಹೋರಾಡಿದ ಸಂತ ಸೇವಾಲಾಲ್ : ರವಿಕುಮಾರ್

ಸಂತ ಸೇವಾಲಾಲ್ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಾವೇಲ್ಲ ಸಾಗಬೇಕು ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್  ತಿಳಿಸಿದರು.

ಮಂಡ್ಯನಗರದ ಬಿ.ಟಿ.ಲಲಿತಾ ನಾಯಕ್ ಬಡಾವಣೆಯಲ್ಲಿ ನಿನ್ನೆ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಸೇವಾಲಾಲ್ ಅವರ 286 ನೇ ಜಯಂತಿಯನ್ನು ನಾವು ಇಂದು ಆಚರಿಸುತ್ತಿದ್ದು. ಶ್ರೀಮಂತರು, ಜಮೀನುದಾದರಾರಿಂದ ತನ್ನ ಸಮುದಾಯದವರ ಮೇಲಾಗುತ್ತಿದ ಶೋಷಣೆಯನ್ನು ಹೋಗಲಾಡಿಸಲು ಹೋರಾಡಿದ ಅವರ ವ್ಯಕ್ತಿತ್ವ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.

ಸಂತ ಸೇವಾಲಾಲ್ ಅವರ ಹೋರಾಟ ಮನೋಭಾವ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರವಾದದ್ದು ಸಮಾಜದಲ್ಲಿ ಎಲ್ಲರು ಒಂದೇ, ಎಲ್ಲರು ಸಹಬಾಳ್ವೆಯಿಂದ ಬಾಳಬೇಕು ಎನ್ನುವ ಮನೋಭಾವ ಅವರದಾಗಿತ್ತು. ತನ್ನ ಜೀವಿತಾವಧಿಯವರೆಗೂ ತಮ್ಮ ಸಮುದಾಯದವರಿಗಾಗಿ ಹೋರಾಡಿದ ಏಕೈಕ ವ್ಯಕ್ತಿ ಸಂತ ಸೇವಾಲಾಲ್ ಎಂದರೆ ತಪ್ಪಾಗುವುದಿಲ್ಲ ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ಎಂ.ವಿ ಪ್ರಕಾಶ್ (ನಾಗೇಶ್), ತನ್ನ ಸಮುದಾಯದವರ ಉಳಿವಿಗಾಗಿ ಹೋರಾಡಿದ ಇಂತಹ ಮಹಾನ್ ವ್ಯಕ್ತಿಯ ದಿನವನ್ನು ನಮ್ಮ ಜಿಲ್ಲೆಯಲ್ಲಿ ಆಚರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಅವರ ನಿಷ್ಠೆ, ವ್ಯಕ್ತಿತ್ವ ಮತ್ತು ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ನಂದೀಶ್, ಸಮುದಾಯ ಮುಖಂಡರುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ