Sunday, October 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಸಾರ್ವಜನಿಕರ ಅಭಿಪ್ರಾಯ ಪಡೆದ ಶಾಸಕ ರವಿಕುಮಾರ್

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಭಾನುವಾರ ಬೆಳಿಗ್ಗೆ ಮಂಡ್ಯ ಜಿಲ್ಲಾಧಿಕಾರಿ ಪಾರ್ಕ್ ಸುತ್ತ (ವಾಕ್) ಪರಿಶೀಲನೆ ನಡೆಸಿ ನಗರದ ಅಭಿವೃದ್ಧಿಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆದರು.

ಮಂಡ್ಯ ನಗರದ ಎಲ್ಲಾ ವಾರ್ಡ್ ರಸ್ತೆಗಳು ಮತ್ತು ಪಾಧಚಾರಿ(ಪುಟ್ ಪಾತ್) ರಸ್ತೆಗಳನ್ನು ಹೊಸದಾಗಿ ನಿರ್ಮಿಸುವುದು ಸೇರಿದಂತೆ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಹಲವು ಕಾಮಗಾರಿಗಳಿಗೆ ಮತ್ತೆ ಹೊಸದಾಗಿ ಸ್ಪರ್ಶ ನೀಡಿ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಡ್ಯ ನಗರವನ್ನು ಸುಂದರ ನಗರವಾಗಿ ಮಾಡಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ಇದಕ್ಕೆ ಎಲ್ಲ ನಾಗರಿಕರ ಬೆಂಬಲ ಬೇಕಿದೆ ಎಂದರು.

ನೆರೆದಿದ್ದ ಪ್ರಜ್ಞಾವಂತ ನಾಗರೀಕರು ಶಾಸಕರಿಗೆ ಮಂಡ್ಯ ನಗರವನ್ನು ಅಭಿವೃದ್ಧಿ ಪಡಿಸಲು ಕೆಲವು ಸಲಹೆಗಳನ್ನು ನೀಡಿದರು. ಯುವ ಜನರು ಇಂದು ಗಾಂಜಾ ಅಫೀಮು ಎನ್ನುವ ಚಟಕ್ಕೆ ದಾಸರಾಗಿ ಬಲಿಪಶುಗಳಾಗುತ್ತಿದ್ದಾರೆ ಇದಕ್ಕೆ ಕಾರಣ ನೀರುದ್ಯೋಗ ಸಮಾಸ್ಯೆಗಳು ಇದನ್ನು ಸರಿಪಡಿಸಲು ಉದ್ಯೋಗವನ್ನು ಸೃಷ್ಟಿಸಬೇಕು ಹಲವು ದಂಧೆಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಬೇಕು. ಇಂತಹ ದಂಧೆ ನಡೆಸುವ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಿ ಜೈಲಿಗೆ ಕಳಿಸಬೇಕು ಎಂದು ತಿಳಿಸಿದರು.

ಶಾಸಕರು ಮಾತನಾಡಿ, ಬಹಳಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು
ಈ ವಿಷಯದಲ್ಲಿ ಸದನದಲ್ಲಿ ಚರ್ಚಿಸಿ ಇದಕ್ಕೆ ಕಡಿವಾಣ ಹಾಕುತ್ತೇನೆ ಮತ್ತು ಮಂಡ್ಯ ತಾಲೂಕಿನ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಾವಿರಾರು ಬಡಜನರು ಇಂದಿಗೂ ಸಹ ಸ್ವಂತ ನಿವೇಶನ ಇಲ್ಲದೆ ಮನೆ ಇಲ್ಲದೆ ಕಷ್ಟಪಡುತ್ತಿದ್ದಾರೆ. ಅದರೆ ಬೇಕಾದಷ್ಟು ಸರ್ಕಾರಿ ಜಾಗಗಳು ದಾಖಲೆಗಳಲ್ಲಿ ಇದೇ ಅದರೆ ಎಲ್ಲವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒಂದೇ ಒಂದು ಎಕರೆ ಜಾಗವು ಸಹ ಇಲ್ಲ ಈ ಸಮಸ್ಯೆಯನ್ನು ಪರಿಹರಿಸಲು ಚಿಂತಿಸುತ್ತಿದ್ದೇನೆ. ಒತ್ತುವರಿ ತೆರೆವು ಮಾಡಲು ಹೋದರೆ ಸಮಸ್ಯೆಗಳು ಸಹ ತಲೆದೂರುತ್ತವೆ ಎಂದು ಕಳವಳ ವ್ಯಕ್ತ ಪಡಿಸಿದರು.

ಈ ಸಮಸ್ಯೆಗಳ ಪರಿಹಾರಕ್ಕೆ ನಾನು ಪ್ರಯತ್ನ ಮಾಡುತ್ತೇನೆ. 5ವರ್ಷಗಳ ನನ್ನ ಅವಧಿಯಲ್ಲಿ ಸಾಕಷ್ಟು ನನ್ನ ಕ್ಷೇತ್ರದ ಮತದಾರರಿಗೆ ಬೇಕಿರುವ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ, ರೈತರು ಕಾರ್ಮಿಕರು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ಕಾರ್ಯಗತ ಗೊಳಿಸಿ ಮಂಡ್ಯ ನಗರವನ್ನು ಅಬಿವೃದ್ದಿ ಪಡಿಸುವ ಜವಾವ್ದಾರಿ ನನ್ನ ಮೇಲಿದೆ ಎಂದು ಹೇಳಿದರು.

ಸಿದ್ದರಾಜು ಎಂ. ಮಂಡ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!