Saturday, November 21, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಶಾಸಕ ರವೀಂದ್ರ ಶ್ರೀಕಂಠಯ್ಯ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಮಂದಿ ಜೆಡಿಎಸ್ ಸೇರ್ಪಡೆ

ವಿಧಾನಸಭಾ ಚುನಾವಣೆಗೆ ಇನ್ನೂ 3 ದಿನ ಬಾಕಿ ಇರುವ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸಮ್ಮುಖದಲ್ಲಿ ಮಂಡ್ಯ ತಾಲ್ಲೂಕಿನ ಯುಲಿಯೂರು, ತೂಬಿನಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ತೊರೆದು ಇಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನಮ್ಮ ಪಕ್ಷಕ್ಕೆ ಎಲ್ಲಾ ಕಾರ್ಯಕರ್ತರನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಪಕ್ಷ ಸೇರಿದ್ದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ. ನೀವು ನನ್ನೊಂದಿಗೆ ಎಂದಿಗೂ ಸಕ್ರಿಯವಾಗಿರಿ, ನಿಮ್ಮ ವಿಶ್ವಾಸವನ್ನು ನಾನು ಎಂದೆಂದಿಗೂ ಉಳಿಸಿಕೊಳ್ಳುತ್ತೇನೆ  ಎಂದು ಭರವಸೆ ನೀಡಿದರು.

nudikarnataka.com

ಮಾಜಿ ಶಾಸಕ ಹೆಚ್.ಹೊನ್ನಪ್ಪ ಅವರ ಪುತ್ತ ಡಾ.ಆದರ್ಶ್ ಗೌಡ ಮಾತನಾಡಿ, ಮತದಾನ ಇನ್ನು ಮೂರು ದಿನವಿರುವಾಗಲೂ ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವುಕ್ಕೆ ಶಾಸಕ ರವೀಂದ್ರ ಅವರ ಗುಣಗಳೇ ಕಾರಣವಾಗಿವೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಮೈ ಮರೆಯದೇ ಶಾಸಕರ ಮತ್ತೊಂದು ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗೆಶ್, ತೂಬಿನಕೆರೆ ಜಗದೀಶ್, ಯೋಗೇಶ್ ಗೌಡ, ತೇಜಸ್ಸು, ಮಂಜು, ರೋಹಿತ್, ಕಿರಣ್, ಶ್ರೇಯಸ್ ಕಾರ್ತಿಕ್, ಹೇಮಂತ್ ಅಖಿಲೇಶ್, ಸುದೀಪ್, ಯೋಗರಾಜ್, ರಿತೇಶ್, ದರ್ಶನ್, ರವಿ, ರಘು, ಅರುಣ್, ಅದರ್ಶ್, ಮನು, ಪುನೀತ್ ಮತ್ತಿತರರು ಬಿಜೆಪಿ ಮತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ