ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ನಾಯಕ ನರೇಂದ್ರ ಮೋದಿಜೀ ಪರವಾಗಿ ವಾತಾವರಣ ನಿರ್ಮಿಸಲು ಸಂಪೂರ್ಣವಾಗಿ ಕೆಲಸ ಮಾಡಿದ ದೇಶದ ಮಾಧ್ಯಮಗಳು, ಎಕ್ಸಿಟ್ ಪೋಲ್ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆಶ್ಚರ್ಯವಾಗುವಂತೆ ಚಾರ್ ಸೌ ಪಾರ್ ಎಂದು ಅಂಕಿ ಸಂಖ್ಯೆ ಕೊಟ್ಟಿದ್ದವು.
ಆದರೆ ಚುನಾವಣೆಗಳಲ್ಲಿ ಸ್ವತಃ ಮೋದಿಜೀ ಅಲ್ಪಮತಕ್ಕೆ ಕುಸಿದು, ಎನ್ಡಿಎ ಮೈತ್ರಿಕೂಟದ ಜಪ ಮಾಡಲು ಶುರು ಮಾಡಿದ ನಂತರ ಮೀಡಿಯಾಗಳಲ್ಲಿ ಮೋದಿಜಿ ಪೋಟೋ, ಮೋದಿಜೀ ಭಜನೆ ದಿಢೀರ್ ಕಡಿಮೆಯಾಗಿತ್ತು.
ಆದರೆ ಪುನಃ ಮೋದಿ ಅವರು ಎನ್ಡಿಎ ಮೈತ್ರಿಕೂಟ ನಾಯಕರಾಗಿ ಆಯ್ಕೆಯಾದ ಮರುಕ್ಷಣದಿಂದ ಮೋದಿಜೀ ಭಜನೆ ಮಾಡಲು ಗೋದಿ ಮೀಡಿಯಾಗಳು ಪ್ರಾರಂಭ ಮಾಡಿವೆ.




