Friday, November 20, 2026

ಪ್ರಾಯೋಗಿಕ ಆವೃತ್ತಿ

ನೇರ ಪಾವತಿ ನೌಕರರಿಗೆ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಮೊದಲ ಅದ್ಯತೆ ನೀಡಿ : ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಮನವಿ

2023ನೇ ಸಾಲಿನಲ್ಲಿ ಪೌರಕಾರ್ಮಿಕರ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ನೇರ ಪಾವತಿ ನೌಕರರಿಗೆ ಮೊದಲ ಅದ್ಯತೆ ನೀಡಿ ಖಾಯಂ ನೇಮಕಾತಿ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘವು ಇಂದು (ಫೆ.6) ಮದ್ದೂರಿನ ಪುರಸಭೆಗೆ ಆಗಮಿಸಿದ ಸಫಾಯಿ ಕರ್ಮಚಾರಿಗಳ ಆಯೋಗದ ಆಧ್ಯಕ್ಷ ಎಂ.ಶಿವಣ್ಣ ಅವರಿಗೆ ಮನವಿ ನೀಡಿತು.

ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ಸುಮಾರು 20 ವರ್ಷಗಳಿಂದ ನೇರ ಪಾವತಿ ವ್ಯವಸ್ಥೆಯಡಿ 130ಕ್ಕೂ ಹೆಚ್ಚು ಪೌರಕಾರ್ಮಿಕರು ಕೇವಲ 40 ರೂ ಕೂಲಿಯಿಂದ ಇಂದಿನವರೆಗೂ ಸೇವೆ ಸಲ್ಲಿಸುತ್ತಿದ್ದಾರೆ.

2017ರಲ್ಲಿ 11 ಜನ ಪೌರ ಕಾರ್ಮಿಕರನ್ನು ನೇರ ನೇಮಕಾತಿಗೆ ಮಂಡ್ಯ ನಗರಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಆ ನೇರ ನೇಮಕಾತಿಯ ಪಟ್ಟಿಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ ನೇರ ಪಾವತಿ ನೌಕರರಿಗೆ ಆದ್ಯತೆ ನೀಡಿಲ್ಲ ಎಂದು ದೂರಿದರು.

2023ರ  ಪೌರಕಾರ್ಮಿಕರ ನೇರ ನೇಮಕಾತಿ ಪಟ್ಟಿಯಲ್ಲಿ ಈ ಹಿಂದಿನಿಂದಲೂ ಸೇವೆಯಲ್ಲಿರುವ ನೇರ ಪಾವತಿ ಪೌರ ಕಾರ್ಮಿಕರಿಗೆ, ಯಾರು ಸೇವೆಯಲ್ಲಿ ಹಿರಿತನ ಹೊಂದಿರುತ್ತಾರೊ, ಅವರಿಗೆ ಮೊದಲ ಆದ್ಯತೆ ನೀಡಬೇಕೆಂದು ಮನವಿ ಮಾಡಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅರ್ಜುನ್, ವಿಜಯ್, ನಾಗರಾಜು, ಆಂಡವ ಸೇರಿದಂತೆ ಹಲವು ನೇರ ಪಾವತಿ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ