ಶ್ರೀರಂಗಪಟ್ಟಣ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 9ನೇ ತರಗತಿಯ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ವಿದ್ಯಾರ್ಥಿನಿ ವಿನುತಾ ಮೂಳೆ ಕ್ಯಾನ್ಸರ್ ರೋಗ ಪೀಡಿತರಾಗಿ ಬಳಲುತ್ತಿದ್ದಾರೆ.

ಈಕೆ ಬೆಂಗಳೂರಿನ ಎನ್ ಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಪ್ರಕಾರ ದೀರ್ಘ ಕಾಲದ ಚಿಕಿತ್ಸೆ ಹಾಗೂ ಆರೈಕೆಗಾಗಿ ಸುಮಾರು 19 ಲಕ್ಷದವರೆಗೂ ವೆಚ್ಚವಾಗಲಿದೆ, ಹಾಗಾಗಿ ದಯಮಾಡಿ ವಿದ್ಯಾರ್ಥಿನಿಯ ಅಮೂಲ್ಯ ಜೀವ ಉಳಿಸಲು ದಾನಿಗಳು, ಸಮಾಜ ಸೇವಾ ಸಂಸ್ಥೆಗಳು, ಉದ್ಯಮಿಗಳು, ಜನಪ್ರತಿನಿಧಿಗಳು ಉದಾರವಾದ ದಾನ ನೀಡಬೇಕೆಂದು ವಿನುತಾ ಅವರ ತಾಯಿ ಹೇಮಾ ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಶ್ರೀರಂಗಪಟ್ಟಣ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದ ವಿನುತಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ, ಶಾಲಾ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಇಂತಹ ಕಾಯಿಲೆ ಕಾಣಿಸಿಕೊಂಡಿರುವುದು ನೋವಿನ ಸಂಗತಿ, ಹಾಗಾಗಿ ದಾನಿಗಳು ಉದಾರ ಮನಸ್ಸಿನಿಂದ ಆರ್ಥಿಕ ಸಹಾಯ ಮಾಡಿ, ವಿದ್ಯಾರ್ಥಿನಿಯನ್ನು ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡಬೇಕೆಂದು ಕೋರಿದರು.
ವಿದ್ಯಾರ್ಥಿನಿಯ ಅಮೂಲ್ಯ ಜೀವವನ್ನು ಉಳಿಸಲು ಅವರ ಕುಟುಂಬಕ್ಕೆ ಮಾನಸಿಕ, ನೈತಿಕ ಹಾಗೂ ಆರ್ಥಿಕವಾಗಿ ಸಹಾಯ ಮಾಡಬೇಕು, ಮೇಲ್ಕಾಣಿಸಿದ ಭಾವಚಿತ್ರದಲ್ಲಿರುವ ಬ್ಯಾಂಕ್ ಖಾತೆ ನಂಬರ್ ಗೆ ಹಾಗೂ ಪೋನ್ ಪೇ ಹಾಗೂ ಗೂಗಲ್ ಪೇ ನಂಬರ್ 7090221842 ಇಲ್ಲಿಗೆ ಧನ ಸಹಾಯ ಮಾಡವಬೇಕೆಂದು ಕೋರಿದರು.




