Saturday, November 21, 2026

ಪ್ರಾಯೋಗಿಕ ಆವೃತ್ತಿ

ರಂಗಭೂಮಿ ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ: ಉಮಾಶ್ರೀ

ರಂಗಭೂಮಿಯ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳೆದು ಮತ್ತೆ ರಂಗಭೂಮಿಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಕಲಾವಿದರು ಮತ್ತು ಕಲಾ ಪೋಷಕರ ಮೇಲಿದೆ ಎಂದು ನಟಿ ಉಮಾಶ್ರೀ ತಿಳಿಸಿದರು .

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವ ಕಾರ್ಯಕ್ರಮದಲ್ಲಿ ರಂಗ ಸನ್ಮಾನವನ್ನ ಸ್ವೀಕರಿಸಿ ನಂತರ ಮಾತನಾಡಿದ ಅವರು, ನೈಜಕಲೆಯನ್ನು ಬೆಳೆಸಬೇಕಾಗಿದೆ, ಆ ನಿಟ್ಟಿನಲ್ಲಿ ಮಳವಳ್ಳಿ ಸುಂದರಮ್ಮ ಅವರು ಸ್ತ್ರೀ ಪಾತ್ರಗಳನ್ನ ಪುರುಷರು ಮಾಡುತ್ತಿದ್ದ ಕಾಲಘಟ್ಟದಲ್ಲಿ ಸ್ತ್ರೀ ಪಾತ್ರಗಳನ್ನ ರಂಗಭೂಮಿಯಲ್ಲಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ರಂಗನಟಿಯಾಗಿ ತಮ್ಮ ಅದ್ಬುತ ಕಲೆಯನ್ನ ಪ್ರದರ್ಶಿಸಿ ಮಳವಳ್ಳಿಗೆ ಕಳಸಪ್ರಾಯರಾಗಿದ್ದಾರೆ ಎಂದರು.

ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು ಅವರ ಅನುಯಾಯಿಗಳು ಬಹಳ ಮಂದಿ ಕಲಾವಿದರಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ರಾಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಮಳವಳ್ಳಿ ಶಿವಣ್ಣ ನೆರವೇರಿಸಿದರು.

ರಂಗಕರ್ಮಿಗಳಾದ ಶ್ರೀನಿವಾಸ ಜಿ ಕಪ್ಪಣ್ಣ, ಲೊಕೇಶ್ ಹಾಗೂ ಮಳವಳ್ಳಿ ಸುಂದರಮ್ಮ ಕುಟುಂಬದವರು ಭಾಗವಹಿಸಿದ್ದರು. ವೇದಿಕೆಯಲ್ಲಿ ರಂಗ ಬಂಡಿಯ ಮಧು, ಸಂಘಟಕರಾದ ಎನ್ ಎಲ್ ಭರತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ