ಗಿಡಗಳನ್ನು ನೆಡುವುದು ಪುಣ್ಯದ ಕೆಲಸ. ಇದು ಕೇವಲ ಗಿಡ ನೆಡುವ ಕಾರ್ಯಕ್ರಮ ವಾಗಬಾರದು ಪ್ರಕೃತಿಯನ್ನು ಸಂರಕ್ಷಿಸುವ ಹೊಣೆಗಾರಿಕೆಯ ಕಾರ್ಯಕ್ರಮವಾಗಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರು ಹೇಳಿದರು.
ಇಂದು (ಜು.13) ಮಾತೃ ಫೌಂಡೇಶನ್ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಾಗಮಂಗಲ. ಅರಣ್ಯ ಇಲಾಖೆ. ಎನ್. ಎಸ್. ಎಸ್. ಘಟಕದ ವತಿಯಿಂದ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ – ಅಂಕುಶಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತೃಗೊಂದು ಮರ – ಸಹಸ್ರ ಸಹಸ್ರ ಗಿಡ ನೆಡುವ ಅಭಿಯಾನ -3 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ. ಬಹುಪಾಲು ಪರಿಸರ ನಾಶಕ್ಕೆ ಪ್ಲಾಸ್ಟಿಕ್ ಬಳಕೆಯೇ ಕಾರಣ. ಪ್ರಕೃತಿ ಸಂರಕ್ಷಣೆಯ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆ ಯನ್ನು ನಿಷೇಧಿಸಬೇಕು ಎಂದರು.

ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ
ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ಯಾಮ್ ಪ್ರಸಾದ್ ಅವರು ಮಾತನಾಡಿ ಎಲ್ಲರೂ ಕೈಗೊಡಿಸಿದರೆ ಉತ್ತಮ ಪರಿಸರ ಸಂರಕ್ಷಣೆಯಂತಹ ಉತ್ತಮ ಕೆಲಸ ಮಾಡಲು ಸಾಧ್ಯ. ಹಿರಿಯರ ಉತ್ತಮ ಮಾರ್ಗದರ್ಶನದೊಂದಿಗೆ ನಾವು ನಡೆದರೆ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಇಂದ್ರೇಶ್ ಅವರು ಮಾತನಾಡಿ. ಕಳೆದ 30-40ವರ್ಷಗಳ ಹಿಂದೆ ಬಾವಿಯ ನೀರನ್ನು ಕುಡಿಯುತ್ತಿದ್ದೆವು ಈಗ ಪರಿಸರ ಹಾಳಾಗುತ್ತಿರುವುದರಿಂದ ಹರಿಯುವ ನೀರನ್ನು ಸಹ ಕುಡಿಯಲು ಸಾಧ್ಯವಾಗುತ್ತಿಲ್ಲ ಸಂವಿಧಾನ ದಲ್ಲಿರುವ ಮೂಲಭೂತ ಕರ್ತವ್ಯದ ಕುರಿತು ಎಲ್ಲ ನಾಗರೀಕರಿಗೂ ಅರಿವಿರಬೇಕು ಎಂದರು.
ಪರಿಸರವನ್ನು ಸಂರಕ್ಷಣೆ ಮಾಡೋಣ
ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ನಡಾಫ್ ಅವರು ಮಾತನಾಡಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಲು ಗಿಡ ಮರಗಳನ್ನು ನೆಟ್ಟು ಪೋಷಿಸುವ ಕೆಲಸವಾಗಬೇಕು. ಮನುಷ್ಯನಿಗೆ ಬೇಕಾದ ಗಾಳಿ ನೀರು ಬೆಳಕನ್ನು ಶುದ್ಧವಾಗಿಸಲು ಪರಿಸರವನ್ನು ಸಂರಕ್ಷಣೆ ಮಾಡೋಣ ಎಂದು ಕರೆ ನೀಡಿದರು.
ಉಪಲೋಕಾಯುಕ್ತರಾದ ಕೆ. ಎನ್. ಫಣೀoದ್ರ ಅವರು ಮಾತನಾಡಿ. ಇಂದಿನ ಕಾಲದ ಸಮಾಜದಲ್ಲಿರುವ ಒಳ್ಳೆಯದನ್ನು ನೋಡಿ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಪ್ರಕೃತಿ ಮಾತೆಯನ್ನು ಸಹ ನಾವು ಸಂರಕ್ಷಣೆ ಮಾಡಬೇಕು
ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ಮಾತನಾಡಿ ಹೆತ್ತ ತಾಯಿ ತಮ್ಮ ಮಕ್ಕಳನ್ನು ಕೇವಲ 9 ತಿಂಗಳು ಮಾತ್ರ ಹೊಟ್ಟೆಯಲ್ಲಿ ಇಟ್ಟು ಪೋಷಿಸುತ್ತಾಳೆ ಆದರೆ ಪ್ರಕೃತಿ ನಾವು ಜೀವಂತವಾಗಿರುವವರೆಗೂ ತಮ್ಮ ಮಡಿಲಿನಲ್ಲಿ ಇಟ್ಟು ಪೋಷಿಸುವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತಾಳೆ. ಪ್ರಕೃತಿ ಮಾತೆಯನ್ನು ಸಹ ನಾವು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮೀನಾಕ್ಷಿ ನೇಗಿ ಅವರು ಮಾತನಾಡಿ ಅರಣ್ಯ ಇಲಾಖೆಗೆ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ನಮ್ಮ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಪ್ರದೇಶವಿದೆ. 6500 ಕ್ಕೂ ಹೆಚ್ಚು ಆನೆಗಳಿವೆ ಭಾರತದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕ, ಅರಣ್ಯ ಇಲಾಖೆಯ ಈ ಸಾಧನೆಯ ಹಿಂದೆ ಹಲವು ಅರಣ್ಯ ಅಧಿಕಾರಿಗಳ ಶ್ರಮವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಲೋಕಾಯುಕ್ತರಾದ ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷ ಟಿ. ಜಿ. ಶಿವಶಂಕರೇಗೌಡ. ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ಜಿಲ್ಲಾ ಪ್ರಧಾನ ಮತ್ತು ಸೆಕ್ಷನ್ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ, ಜಿಲ್ಲಾಧಿಕಾರಿ ಡಾ. ಕುಮಾರ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಜು, ಲೋಕಾಯುಕ್ತ ಉಪನಿಬಂಧಕ ಎನ್. ವಿ. ಅರವಿಂದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ ಎಂ. ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕ ಪ್ರಾಧಿಕಾರ ಡಾ. ಎಂ. ಜೆ. ಪ್ರಭು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




