Sunday, March 3, 2024

ಪ್ರಾಯೋಗಿಕ ಆವೃತ್ತಿ

ಕ್ರಾಂತಿ ಚಲನಚಿತ್ರ ಯಶಸ್ವಿಗೆ ಸಸಿ ವಿತರಣೆ

ಮದ್ದೂರು ತಾಲ್ಲೂಕಿನ ಹಳ್ಳಿಕೆರೆ ಗ್ರಾಮದ ದರ್ಶನ್ ಅಭಿಮಾನಿಗಳ ಬಳಗದ ಸದಸ್ಯರು ಸುತ್ತ ಮುತ್ತಲಿನ ಶಕ್ತಿ ದೇವತೆ ಬೆಟ್ಟದ ಅರಸಮ್ಮ ದೇವಾಲಯದ ಬಳಿ ದರ್ಶನ್ ಅವರ ಅಭಿನಯದ ಕ್ರಾಂತಿ ಚಲನಚಿತ್ರ ನೂರು ದಿನ ಪುರೈಸಿದರೆ ನೂರು ತೆಂಗಿನಕಾಯಿ ಹೊಡೆಯುವುದಾಗಿ ಹರಕೆ ಹೊತ್ತು ಚಲನಚಿತ್ರದ ಪ್ರಮೋಷನ್ ಮಾಡಿ ಸಂಭ್ರಮಿಸಿದರು.

ಗ್ರಾಮದ ಪ್ರಮುಖ ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಕ್ರಾಂತಿ ಚಿತ್ರದ ಕಟ್ ಔಟ್ ನಿಲ್ಲಿಸಿ ನೆಚ್ಚಿನ ನಟ ದರ್ಶನ್ ಕಟ್ ಔಟ್ಗೆ ಪುಷ್ಪಾರ್ಚನೆ ನೆರವೇರಿಸಿ ಅಭಿಮಾನ ಮೆರೆದರು. ಗ್ರಾಮದಲ್ಲಿ ಸಾರ್ವಜನಿಕವಾಗಿ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.

ಸುಮಾರು 500 ಹೆಚ್ಚು ತೆಂಗು, ತೇಗ, ನುಗ್ಗೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು.
ಕಾರ್ಯಕ್ರಮದ ವೇಳೆ ಮಹೇಶ್,ಎಚ್‌. ಎಸ್. ಅಭಿ ,ಅಜಯ್,ಪುನೀತ್, ಪಾರ್ಥ,ಅಶೋಕ,ನವೀನ, ಸುರೇಶ್,ಪ್ರವೀಣ್, ಮನೋಜ್,ಎಚ್. ಸಿ. ಚಿದಾನಂದ, ಪ್ರತಾಪ್, ಕಿರಣ್,ಎಸ್. ಪ್ರದೀಪ್,ವೈ ಕಿರಣ,ಎಸ್ ‌.ರಘು,ಎಚ್. ರೋಹಿತ್,ಶಾಂತಾರಾಜು ಅನಿಲ್, ಅರುಣ, ಚಂದನ್, ಎಚ್. ಅಭಿ,ಅಪ್ಪು,ನಾಗೇಂದ್ರ, ನಿಂಗರಾಜು,ದರ್ಶನ,ಬಿ. ಚಿದು ಹಾಗೂ ಗ್ರಾಮಸ್ಥರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!