Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರಸ್ತೆಬದಿ ಕಸ ಹಾಕುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಡ್ಯ ನಗರದ ಸುತ್ತಮುತ್ತಲಿನ ಬಡಾವಣೆಗಳಲ್ಲಿನ ನಿವಾಸಿಗಳು ಕಸದ ಚೀಲ, ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿ ಬಿಸಾಡುತ್ತಿರುವುದನ್ನು ಖಂಡಿಸಿ ಜೈ ಕರ್ನಾಟಕ ಪರಿಷತ್ತು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ನಗರಸಭೆಯ ಕಸ ವಿಲೇವಾರಿ ವಾಹನ ಮನೆಯ ಮುಂಭಾಗ ಬಂದರೂ ಕೂಡ ಆ ವಾಹನದಲ್ಲಿ ಕಸ ಹಾಕದೇ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿರುವ ನಿವಾಸಿಗಳ ವಿರುದ್ಧ ಕ್ರಮಕ್ಕೆ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಒತ್ತಾಯಿಸಿದ್ದಾರೆ.

ಕೆಲ ಸಾರ್ವಜನಿಕರು ತಮಗೆ ಇಷ್ಟ ಬಂದ ರೀತಿಯಲ್ಲಿ ಖಾಲಿ ನಿವೇಶನ, ರಸ್ತೆ ಬದಿ, ಕಾಲುವೆ ಇನ್ನಿತರೆಡೆಗಳಲ್ಲಿ ಕಸ ಹಾಕುತ್ತಿರುವುದು ಸರಿಯಲ್ಲ. ಇದರಿಂದ ಅಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುವುದಲ್ಲದೆ, ರೋಗ ರುಜಿನಗಳು ಹರಡುವ ಭೀತಿ ಇದೆ. ಯಾರೋ ಮಾಡಿದ ತಪ್ಪಿಗೆ ಅಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ನಗರಸಭೆಯ ಅಧಿಕಾರಿಗಳು ಕಸ ವಿಲೇವಾರಿ ಜೊತೆಗೆ ಸಿಕ್ಕ ಸಿಕ್ಕ ಜಾಗದಲ್ಲಿ ಕಸ ಹಾಕುವವರನ್ನು ಗಮನಿಸಿ, ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ನಾರಾಯಣ್ ಒತ್ತಾಯಿಸಿದರು.

ಮಂಡ್ಯ ನಗರದ ಮೇಲುಕೋಟೆ ರಸ್ತೆಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹಾಗೂ ಡಿ.ದೇವರಾಜ್ ಅರಸು ಬಾಲಕಿಯರ ವಸತಿ ನಿಲಯ, ಕಲ್ಲಹಳ್ಳಿ ಶಂಕರಪುರ ಇತರೆ ಬಡಾವಾಣೆಗಳಿಗೆ ಕಸ ಹಾಕಿರುವ ಜಾಗಗಳಿಗೆ ಬೇಟಿ ನೀಡಿ ಇನ್ನೂ ಮುಂದೆ ಈ ರೀತಿ ಕಸ ಹಾಕಿದರೆ ಅಂತವರ ವಿರುದ್ಧ ಮಂಡ್ಯ ನಗರಸಭೆಯವರು ಕ್ರಮ ಜರುಗಿಸುತ್ತಾರೆ. ಅನಾಗರೀಕರಂತೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ತಮ್ಮ ಬಡಾವಣೆಯ ಸೌಂದರ್ಯವನ್ನು ಹಾಳು ಮಾಡಬೇಡಿ ಎಂದು ಅಲ್ಲಿನ ಸ್ಥಳಿಯರಿಗೆ ಎಚ್ಚರಿಸಿದರು.

ಜೊತೆಗೆ ಸಂಘಟನೆಯ ಶಾಖಾಧ್ಯಕ್ಷರು ಇನ್ನೂ ಮುಂದೆ ಮನೆಮನೆಗೆ ಹೋಗಿ ಸ್ವಚ್ಚತಾ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಆ ಬಡಾವಣೆಗಳ ಜೈ ಕರ್ನಾಟಕ ಶಾಖಾಧ್ಯಕ್ಷರಾದ ಜೆ.ಬಸವರಾಜ್, ಕೆ.ಬಿ.ಕೆಂಪೇಗೌಡ, ಬಿ.ಪುಟ್ಟಸ್ವಾಮಿ, ಎಂ.ಪುಟ್ಟಸ್ವಾಮಿ, ಬಸವೇಗೌಡ, ಪುಟ್ಟೇಗೌಡ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ