ಸಕ್ಕರೆ ನಗರಿ ಮಂಡ್ಯ ಮಂಗಳವಾರ ಮುಂಜಾನೆ ಸಹಸ್ರಾರು ಜನರ ‘ಕನ್ನಡಕ್ಕಾಗಿ ಓಟ’ಕ್ಕೆ ಸಾಕ್ಷಿಯಾಯಿತು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಗೆ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಚಾಲನೆ ನೀಡಿದರು. ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರೂ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಎನ್.ಚಲುವರಾಯಸ್ವಾಮಿ, ವಿನಯ್ ಗುರೂಜಿ ಭಾಗವಹಿಸಿದ್ದರು.

ಚಿತ್ರತಾರೆಯರ ಸಾಥ್
,ಕನ್ನಡ ಚಿತ್ರರಂಗದ ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಸಪ್ತಮಿಗೌಡ, ಸಚಿನ್ ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್ ಗೌಡ (ಗಣಿಗ), ವಿಧಾನಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡ, ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಸಮ್ಮೇಳನದ ಸಂಚಾಲರಾದ ಡಾ.ಮೀರಾಶಿವಲಿಂಗಯ್ಯ, ಜಿಲ್ಲಾಧಿಕಾರಿ ಡಾ. ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಸಿಇಓ ಶೇಖ್ ತನ್ವೀರ್ ಆಸೀಫ್, ನಗರಸಭೆ ಅಧ್ಯಕ್ಷ ಪ್ರಕಾಶ್ ಎಂ. ವಿ. (ನಾಗೇಶ್) ಇತರರು ಭಾಗವಹಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ನರೆದಿದ್ದ ಕನ್ನಡ ಅಭಿಮಾನಿಗಳು ಚಳಿಯನ್ನು ಲೆಕ್ಕಿಸದೆ ಉತ್ಸಾಹದಿಂದ ಮ್ಯಾರಥಾನ್ ನಲ್ಲಿ ಪಾಲ್ಗೊಂಡರು.

ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಹಾಗೂ ಸಚಿವ ಚಲುವರಾಯಸ್ವಾಮಿ ಹಾಗೂ ಅಧಿಕಾರಿಗಳು ಮ್ಯಾರಥಾನ್ ನಲ್ಲಿ ತಾವೂ ಓಡುವ ಮೂಲಕ ಕನ್ನಡಕ್ಕಾಗಿ ಓಟದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಮತ್ತಷ್ಟು ಉತ್ಸಾಹ ತುಂಬಿದರು.




