ಸಮಾಜದಲ್ಲಿ ಹೊಸ ಬದುಕಿನ ನೆಲೆಗೆ ಜನಜಾಗೃತಿಯ ಕಾರ್ಯ ಯೋಜನೆಗಳಿಂದ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿಕಾಯಿ ತಿಳಿಸಿದರು.
ನಾಗಮಂಗಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ಮಂಡ್ಯ ಜಿಲ್ಲೆ ವೇದಿಕೆಯಿಂದ ನಡೆದ ಜಿಲ್ಲಾಮಟ್ಟದ ಜನಜಾಗೃತಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜನಜಾಗೃತಿ ಯೋಜನೆಗಳು ಸಮಾಜದಲ್ಲಿ ಬಹುಬೇಗ ತಲುಪುವ ಸಾಮಾಜಿಕ ಕಾರ್ಯ. ಎಲ್ಲೆಡೆ ಮೆಚ್ಚುಗೆಗೊಂಡಿದ್ದು ಸಮಾಜದಲ್ಲಿ ಸಮೃದ್ಧಿ ವಾತಾವರಣ ಸೃಷ್ಠಿಸಲು ನೆರವಾಗಿವೆ. ಶ್ರೀ ಕ್ಷೇತ್ರದ ಜನಜಾಗೃತಿಯ ವೇದಿಕೆಯ ಯೋಜನೆಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳ್ಳದೆ ರಾಜ್ಯದಲ್ಲೆಡೆ ತಾಲೂಕು ಜಿಲ್ಲಾ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ನಡೆಯಲಿವೆ ಎಂದರು.
ಸಮಾರಂಭ ನಿರ್ದೇಶಕಿ ಚೇತನಾ, ಜನಜಾಗೃತಿ ವೇದಿಕೆಯ ಮೈಸೂರು ವಿಭಾಗದ ಯೋಜನಾಧಿಕಾರಿ ಮಾಧು ನಾಯಕ್ ಹಾಗೂ ತಾಲೂಕು ಯೋಜನೆ ಅಧಿಕಾರಿ ದಿವಾಕರ್ ಸೇರಿದಂತೆ ಹಲವರು ಉಪಸಿತರಿದ್ದರು




