Friday, April 19, 2024

ಪ್ರಾಯೋಗಿಕ ಆವೃತ್ತಿ

ಎಸ್ ಎಸ್ ಎಲ್ ಸಿ: ಮಂಡ್ಯ ಜಿಲ್ಲೆ ಶೇ.94.70 ಸಾಧನೆ

ಕಳೆದ 2022 ಮಾರ್ಚ್/ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಮಂಡ್ಯ ಜಿಲ್ಲೆ ಶೇ.94.70 ಸಾಧನೆಯೊಂದಿಗೆ ಎ ಗ್ರೇಡ್ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು 20,077 ಮಂದಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 19,002 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇದರಲ್ಲಿ 9611 ಬಾಲಕರು ಹಾಗೂ 9401 ಬಾಲಕಿಯರು ತೇರ್ಗಡೆಯಾಗಿದ್ದು,ಒಟ್ಟಾರೆ ಶೇ.94.70 ಫಲಿತಾಂಶ ಪಡೆದು ಎ ದರ್ಜೆ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಮದ್ದೂರು ತಾಲ್ಲೂಕು ಶೇ. 98.05 ಸಾಧನೆಯೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಶೇ. 96.34 ಫಲಿತಾಂಶ ಪಡೆದು ಕೆ.ಆರ್.ಪೇಟೆ ತಾಲ್ಲೂಕು ದ್ವಿತೀಯ ಸ್ಥಾನ ಪಡೆದಿದೆ.

ನಾಗಮಂಗಲ ಶೇ. 95.77 ಫಲಿತಾಂಶ ಪಡೆದು ಮೂರನೇ ಸ್ಥಾನದಲ್ಲಿ, ಶೇ.95. 57 ಫಲಿತಾಂಶ ಪಡೆದು ನಾಗಮಂಗಲ ನಾಲ್ಕನೇ ಸ್ಥಾನ ಪಡೆದಿದೆ.

ಮಂಡ್ಯ ಉತ್ತರ ಶೇ.95.21 ಫಲಿತಾಂಶ ಪಡೆದು 5ನೇ ಸ್ಥಾನದಲ್ಲಿ,ಪಾಂಡವಪುರ ತಾಲೂಕು ಶೇಕಡ 95.17 ಫಲಿತಾಂಶದೊಂದಿಗೆ ಆರನೇ ಸ್ಥಾನ ಪಡೆದಿದೆ.

ಶೇ.91.45 ಫಲಿತಾಂಶ ಪಡೆದು ಶ್ರೀರಂಗಪಟ್ಟಣ ಏಳನೇ ಸ್ಥಾನ ಪಡೆದಿದ್ದರೆ, ಶೇ. 89.63 ಫಲಿತಾಂಶ ಪಡೆದು ಮಂಡ್ಯ ದಕ್ಷಿಣ ಎಂಟನೇ ಸ್ಥಾನ ಪಡೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!