ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸೌಮ್ಯನಟರಾಜು 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಒಟ್ಟು 19 ಸದಸ್ಯ ಬಲದ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸೌಮ್ಯನಟರಾಜು, ಕಾಂಗ್ರೆಸ್ ಬೆಂಬಲಿತ ಶ್ರುತಿ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾರೂ ಹಾಜರಾಗಲಿಲ್ಲ. ಹಾಜರಾಗಿದ್ದ ಜೆಡಿಎಸ್‌ನ 13 ಮಂದಿ ಸದಸ್ಯರು ಸೌಮ್ಯ ನಟರಾಜು ಅವರ ಪರ ಮತ ಚಲಾಯಿಸಿದರು. ಸೌಮ್ಯನಟರಾಜು ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಸುಧಾಮ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸೇರಿದಂತೆ ಗ್ರಾ.ಪಂ.ಸದ್ಯಸ್ಯರು ಅಭಿನಂದಿಸಿದರು.




