Friday, November 20, 2026

ಪ್ರಾಯೋಗಿಕ ಆವೃತ್ತಿ

ಧಿಡೀರ್ ಶ್ರೀಮಂತಿಕೆಯ ದುರಾಸೆ ಭ್ರಷ್ಟಾಚಾರ ಹೆಚ್ಚಿಸಿದೆ- ಸಂತೋಷ್ ಹೆಗ್ಡೆ

ಧಿಡೀರ್ ಶ್ರೀಮಂತರಾಗಬೇಕು ಎಂಬ ಅತಿಯಾದ ದುರಾಸೆಯಿಂದ ಅಧಿಕಾರಿಗಳು, ಸರ್ಕಾರಿ ನೌಕರರು ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸುತ್ತಿರುವುದರಿಂದ ಭ್ರಷ್ಠಾಚಾರವೆಂಬ
ಪೆಡಂಭೂತವು ಜೀವಂತವಾಗಿದೆ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ಹೆಗಡೆ ಆತಂಕ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ತಾಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಡದಹಳ್ಳಿಯ ಶ್ರೀಪಂಚ ಭೂತೇಶ್ವರ ಸುಕ್ಷೇತ್ರದಲ್ಲಿ ಅಕ್ಷರ ಅಮವಾಸ್ಯೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ತೃಪ್ತಿ ಹಾಗೂ ಸಾರ್ಥಕತೆಯನ್ನು ಮೈಗೂಡಿಸಿಕೊಂಡು ಹೆಜ್ಜೆ ಹಾಕಿದರೆ ಭ್ರಷ್ಠಾಚಾರವು ದೂರಾಗಿ
ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ. ಮಾನವನಲ್ಲಿನ ಅತಿಯಾದ ಹಣದ ವ್ಯಾಮೋಹದಿಂದಾಗಿ ಅಧಿಕಾರಿಗಳು ಮನುಷ್ಯತ್ವವನ್ನು ಮರೆತು ಮೃಗಗಳಂತೆ ವರ್ತಿಸುತ್ತಿರುವುದರಿಂದ ಭ್ರಷ್ಢಾಚಾರವೆಂಬ ಪೆಡಂಭೂತವನ್ನು ನಮ್ಮ ದೇಶದಿಂದ ಇನ್ನೂ ಹೊಡೆದೋಡಿಸಲು ಸಾಧ್ಯವಾಗಿಲ್ಲ ಎಂದರು.

ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದು ಸಂಪಾದಿಸುವ ಲಂಚದ ಹಣವನ್ನು ನಾವು ಸ್ವೀಕರಿಸುವುದಿಲ್ಲ ಎಂಬ ಮನೋಭಾವನೆಯನ್ನು ಎಲ್ಲಿಯವರೆಗೆ ನಾವು ರೂಢಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಯಾವುದೇ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಮಾನವರಾದ ನಾವು ಮೊದಲು
ಮಾನವತೆಯನ್ನು ಬೆಳೆಸಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡು
ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ನಮ್ಮ ಜೀವನದ ಉಸಿರಾಗಬೇಕು ಎಂದರು.

ಯುವಜನರು ಹಾಗೂ ವಿದ್ಯಾರ್ಥಿಗಳು ಅನ್ಯಾಯ ಅಕ್ರಮಗಳು ಹಾಗೂ ಭ್ರಷ್ಠಾಚಾರದ ನಿರ್ಮೂಲನೆಗಾಗಿ ಬೀದಿಗಿಳಿದು ಹೋರಾಟ ನಡೆಸುವ ಮನೋಭಾವನೆ ಹಾಗೂ ಧೈರ್ಯವನ್ನು ಬೆಳೆಸಿಕೊಂಡು ನಮ್ಮ ಕಣ್ಣೆದುರಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡುವ ಛಾತಿಯನ್ನು ಬೆಳೆಸಿಕೊಂಡು ಮುನ್ನಡೆದರೆ ಮಾತ್ರ ಹಾದಿ ತಪ್ಪುತ್ತಿರುವ ಅಧಿಕಾರಿಗಳು ಸೇರಿದಂತೆ ಇಡೀ ಸಮಾಜವನ್ನೇ ಸರಿ
ದಾರಿಯಲ್ಲಿ ತರಲು ಸಾಧ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದೇವರೂರು ಮಾನವಧರ್ಮ ಪೀಠದ ಡಾ.ಶ್ರೀ ಮಾದೇಶ್‌ಗುರೂಜಿ ಅವರು
ಆಶೀರ್ವಚನ ನೀಡಿದರು.

ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಹೆಗ್ಗಡಹಳ್ಳಿ
ಕುಮಾರಸ್ವಾಮಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ರೈತಮುಖಂಡ ಬಿಬಾಚಹಳ್ಳಿ ಪ್ರಸನ್ನ, ಪತ್ರಕರ್ತ ಕಾಡುಮೆಣಸ ಚಂದ್ರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ