✍️ ಶಿವಸುಂದರ್
ಜಸ್ಟ್ ಆಸ್ಕಿಂಗ್
“SC-ST ಮೀಸಲಾತಿ ಹೆಚ್ಚಳವೂ ಮತ್ತೊಂದು ಬುರುಡೆ…
ಮಾತು ಕೊಟ್ಟು ಮೋಸ ಮಾಡಿತೇ ಬಿಜೆಪಿ ಸರ್ಕಾರ?”
SC ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಏರಿಸುವ ಮತ್ತು ST ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಏರಿಸುವ ಕಾಯಿದೆಯನ್ನು ಕರ್ನಾಟಕ ಸರ್ಕಾರ ಮಾಡಿದೆಯಷ್ಟೆ.
ಆದರೆ ಅದು ಒಟ್ಟಾರೆಯಾಗಿ ಶೇ. 50 ಮೀಸಲಾತಿಯನ್ನು ಮೇಲ್ಮಿತಿಯನ್ನು ಮೀರುವುದರಿಂದ, ಈ ಕಾಯಿದೆ ಸಾಂವಿಧಾನಿಕವಾಗಿ ಸಿಂಧುವಾಗಬೇಕೆಂದರೆ…
ಒಂದೋ ಕೇಂದ್ರ ಸರ್ಕಾರ ನ್ಯಾಯಾಂಗ ವಿಧಿಸಿದ ಶೇ. 50 ಮೇಲ್ಮಿತಿಯನ್ನು ಮೀರುವ ತಿದ್ದುಪಡಿ ತರಬೇಕು.
ಅಥವಾ
ಕರ್ನಾಟಕದ ಕಾಯಿದೆಯನ್ನು ನ್ಯಾಯಾಂಗದ ಪರಿವೀಕ್ಷಣೆಯಿಂದ ಹೊರಗಿಡುವ 9ನೇ ಶೆಡ್ಯೂಲ್ ಗೆ ಸೇರಿಸಬೇಕು.
ಹಾಗೆ ಮಾಡಬೇಕೆಂದರೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು.
ಆದರೆ ನಿನ್ನೆ ಲೋಕಸಭೆಯಲ್ಲಿ ಸಮಾಜ ಕಲ್ಯಾಣ ಮಂತ್ರಿ ನಾರಾಯಣಸ್ವಾಮಿಯವರು ಕೊಟ್ಟಿರುವ ಲಿಖಿತ ಉತ್ತರದಲ್ಲಿ:
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಮೇಲ್ಮಿತಿಯನ್ನು ಶೇ. 50 ಕ್ಕಿಂತ ಹೆಚ್ಚಿಗೆ ಮಾಡುವ ಯಾವ ಉದ್ದೇಶವೂ ಇಲ್ಲವೆಂದೂ
ಕರ್ನಾಟಕದ ಬಿಜೆಪಿ ಸರ್ಕಾರವು ತಾನು ಹೆಚ್ಚಿಸಿರುವ SC-ST ಮೀಸಲಾತಿ ಪ್ರಮಾಣವನ್ನು 9 ನೇ ಷೆಡ್ಯೂಲಿಗೆ ಸೇರಿಸುವಂತೆ ಯಾವುದೇ ಮನವಿ ಮಾಡಿಲ್ಲವೆಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.
ನಿನ್ನೆ ಲೋಕಸಭೆಯಲ್ಲಿ ಬಿಜೆಪಿ ಮಂತ್ರಿ ನಾರಾಯಣ ಸ್ವಾಮಿ ಕೊಟ್ಟ ಉತ್ತರವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು :
https://pqals.nic.in/annex/1711/AU2153.pdf
ಡಬಲ್ ಇಂಜಿನ್ ಸರ್ಕಾರವೆಂದರೆ ಡಬಲ್ ದ್ರೋಹದ ಸರ್ಕಾರವೆಂಬುದಕ್ಕೆ ಇನ್ನೆಷ್ಟು ಪುರಾವೆಗಳು ಬೇಕು ?
ಜಸ್ಟ್ ಆಸ್ಕಿಂಗ್




