ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್ ಎನ್ ಲಿಂಗರಾಜು ಅವಿರೋಧವಾಗಿ ಆಯ್ಕೆಯಾದರು.
ಇಂದು ನಡೆದ 11 ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಲಿಂಗರಾಜು ಅವಿರೋಧ ಆಯ್ಕೆಯಾದರು, ಮಾಜಿ ಅಧ್ಯಕ್ಷೆ ಸುಕನ್ಯಾ ಎಚ್.ಡಿ ಅವರು ಅಧಿಕಾರ ಹಸ್ತಾಂತರಿಸಿದರು. ಗ್ರಾಮಸ್ಥರು ಹಾರ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡದೇ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಈ ವೇಳೆ ಉಪಾಧ್ಯಕ್ಷರಾದ ಚಿಕ್ಕಬೋರಯ್ಯ, ನಿರ್ದೇಶಕರಾದ ರವೀಂದ ಎಚ್. ಎಸ್, ಸುಬ್ಬಣ್ಣ, ಸುರೇಶ್, ಪುಟ್ಟಲಿಂಗಯ್ಯ, ನಿಂಗರಾಜು ಸಿ.ಬಿ. ಶೋಭಾ, ಪುಟಸ್ವಾಮಿ, ವಿಜಯೇಂದ್ರ, ನಾಮ ನಿರ್ದೇಶನ ಸದಸ್ಯರಾದ ಶಂಕರೇಗೌಡ ರಾಯಶೆಟ್ಟಿಪುರ, ಸಂತೋಷ್ ಉಪಸ್ಥಿತರಿದ್ದರು.




