Tuesday, November 24, 2026

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ| ಮೆರವಣಿಗೆಗೆ ಉತ್ತಮ‌ ಕಲಾತಂಡಗಳ ಆಯ್ಕೆ: ಮಧು ಮಾದೇಗೌಡ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಯು ಆಕರ್ಷಣೀಯವಾಗಿ ಜನ- ಮನದಲ್ಲಿ ಚಿರಕಾಲ ಉಳಿಯಬೇಕು ಎಂದರೆ ಮೆರವಣಿಗೆಗೆ ಉತ್ತಮ‌ ಕಲಾತಂಡಗಳ ಆಯ್ಕೆ ಮುಖ್ಯ ಎಂದು ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೆರವಣಿಗೆ ಉಪಸಮಿತಿ ಸಭೆ ನಡೆಸಿ ಮಾತನಾಡಿದರು. ಮೆರವಣಿಗೆ ಉಪಸಮಿತಿಯಿಂದ 95 ಲಕ್ಷ ರೂ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತಾತ್ಕಾಲಿಕವಾಗಿ ಅಂದಾಜು 70 ಲಕ್ಷ ರೂ ನೀಡಲಾಗಿದೆ. ನೀಡಲಾಗಿರುವ ಅನುದಾನದಲ್ಲಿ ಮೆರವಣಿಗೆಯನ್ನು ಉತ್ತಮವಾಗಿ ಆಯೋಜಿಸಬೇಕು ಎಂದರು.

ಪ್ರತಿ ಜಿಲ್ಲೆಯಿಂದ 3 ಕಲಾತಂಡಗಳ ವಿವರ ಸಮಿತಿಯಲ್ಲಿ ಲಭ್ಯವಿದ್ದು, ಒಂದೊಂದು ತಂಡವನ್ನು ಅವರ ಪ್ರದರ್ಶನದ ವಿಡಿಯೋ ತುಣುಕುಗಳನ್ನು ನೋಡಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವಾಗ ಬೇರೆ ಬೇರೆ ಕಲಾ ಪ್ರಕಾರಗಳನ್ನು ಆಯ್ಕೆ ಮಾಡಬೇಕು ಎಂದರು.

ಮೆರವಣಿಗೆಯಲ್ಲಿ 87 ಅಟೋಗಳು ಮೆರವಣಿಗೆಯಲ್ಲಿ 87 ಸಮ್ಮೇಳನದ ಅಧ್ಯಕ್ಷರ ಭಾವಚಿತ್ರದೊಂದಿಗೆ ಕನ್ನಡದ ಬಾವುಟದೊಂದಿಗೆ ಅಲಂಕೃತವಾಗಿ ಭಾಗವಹಿಸಲು ಸಿಂಗರಿಸಬೇಕು ಎಂದರು.

ಮೆರವಣಿಗೆಯಲ್ಲಿ 20 ಎತ್ತಿನಗಾಡಿಗಳು ರೈತರ ಗೌರವವನ್ನು ಹೆಚ್ಚಿಸುವ ರೀತಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕಂಪನ್ನು ಸೂಸುವ ರೀತಿ ಸಜ್ಜುಗೊಳಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಪ್ರವೃತರಾಗಬೇಕು ಎಂದರು.

ಸ್ತಬ್ಧಚಿತ್ರಗಳು ಜಿಲ್ಲೆಯ ಸಂಸ್ಕೃತಿ, ಸಾಹಿತಿ, ಕೃಷಿ ಸೇರಿದಂತೆ ಇನ್ನಿತರೆ ವೈವಿದ್ಯಮಯ ವಿಷಯಗಳನ್ನು ಒಟ್ಟುಗೂಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ರೀತಿ 5 ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಬೇಕು ಎಂದರು.

ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ವಸತಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ವ್ಯವಸ್ಥೆ ವ್ಯವಸ್ಥಿತವಾಗಿಯಾಗಬೇಕು ಎಂದರು.

ಸಭೆಯಲ್ಲಿನಗರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ‌ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ಗೌರವ ಕಾರ್ಯದರ್ಶಿ ಹರ್ಷ, ಕೃಷ್ಣೇಗೌಡ ಹುಸ್ಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ: ನಂದೀಶ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ