Friday, November 20, 2026

ಪ್ರಾಯೋಗಿಕ ಆವೃತ್ತಿ

ತೆರಿಗೆ ವಸೂಲಿಯಲ್ಲಿ ಶಿವಳ್ಳಿ ಗ್ರಾಮ ಪಂಚಾಯಿತಿ ಮಾದರಿ : ದರ್ಶನ್‌ಪುಟ್ಟಣ್ಣಯ್ಯ

ತೆರಿಗೆ ವಸೂಲಿಯಲ್ಲಿ ಶಿವಳ್ಳಿ ಗ್ರಾಮ ಪಂಚಾಯಿತಿ ಮಾದರಿ ಪಂಚಾಯಿತಿಯಾಗುತ್ತಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರ , ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ., ತಾ.ಪಂ. ಆಯೋಜಿಸಿದ್ದ ಪಂಚಾಯಿತಿಯ ನೂತನ ಸಭಾಂಗಣ ಉದ್ಘಾಟನೆ ಮತ್ತು ಸ್ಮಶಾನ ಅಭಿವೃದ್ದಿ-ಸಸಿ ನೆಡುವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳಲ್ಲಿ ತೆರೆಗೆ ವಸೂಲಿ ಹಣದಿಂದ ಅಭಿವೃದ್ದಿಗೆ ಬಳಸಿ, ಗ್ರಾಮ ಪಂಚಾಯಿತಿ ಸಭಾಂಗಣ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಜವಬ್ದಾರಿ ಮೆರೆದಿದ್ದಾರೆ, ಗ್ರಾಮಸ್ಥರು ಕೂಡ ತೆರೆಗೆ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಎಂದು ನುಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಆದಾಯ ಮೂಲ ನೋಡಿಕೊಂಡು ಅಭಿವೃದ್ದಿ ಪಡಿಸಿ, ಎಲ್ಲಾ ನಾಗರೀಕರಿಗೂ ಉತ್ತಮ ಸೇವೆ ನೀಡಿ, ಒಂದು ಮಾದರಿ ಗ್ರಾಮ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ಪಡುತ್ತಿರುವುದು ಉತ್ತಮ, ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.

ಪಿಡಿಓ ಎಚ್.ಎಸ್.ಶಿವಕುಮಾರ್, ದುದ್ದ ಹೋಬಳಿಗೆ ಒಂದು ಪ್ರಮುಖವಾದ ಪಂಚಾಯಿತಿಯಾಗಿ ಶಿವಳ್ಳಿ ಪಂಚಾಯಿತಿ ಇದೆ, ಅತ್ಯಂತ ಚಿಕ್ಕಜಾಗದಲ್ಲಿ ಕುಳಿತು ಮೀಟಿಂಗ್, ಸಭೆ ಮಾಡುವುದು ಕಿರಿಕಿರಿಯಾಗುತ್ತಿತ್ತು, ಎಲ್ಲರ ಅಭಿಪ್ರಾಯ ಮತ್ತು ಶ್ರಮದಿಂದ ಸಭಾಂಗಣ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳ ಅಭಿವೃದ್ದಿಗೆ ಆಧ್ಯತೆ, ತೆರಿಗೆ ವಸೂಲಾಯಿಗೆ ಕ್ರಮ, ಸ್ಮಶಾನಗಳ ಅಭಿವೃದ್ದಿ, ನರೇಗ ಯೋಜನೆಯಡಿ ವಿವಿಧ ಕಾಮಗಾರಿಗಳ ಕ್ರೀಯಾಯೋಜನೆ ರಚಿಸಿ, ಮತ್ತಷ್ಟು ಸೇವೆ ನೀಡಲು ಮುಂದಾಗುತ್ತೇವೆ, ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಂಚಾಯಿತಿ ನಿಧಿಯಿಂದ ಪ್ರತಿಭಾವಂತ ವಿದ್ಯಾರ್ಥಿನಿ ಓದಿಗೆ ಆರ್ಥಿಕ ನೆರವು ನೀಡಲಾಯಿತು, ಗ್ರಾಪಂ.ವ್ಯಾಪ್ತಿಯ ಮರಡಿಪುರ ಗ್ರಾಮದ ಸ್ಮಾಶನ ಅಭಿವೃದ್ದಿ ಮತ್ತು ಸಸಿನೆಡುವ ಕಾರ್ಯ ಶಾಸಕರ ಸಮ್ಮುಖದಲ್ಲಿ ನಡೆಯಿತು, ವಿವಿಧ ಗ್ರಾಮಗಳ ಮುಖಂಡು ಶಾಸಕರನ್ನು ಭೇಟಿ ಮಾಡಿ ಅಭಿವೃದ್ದಿ ವಿಚಾರ ಕುರಿತು ಅರ್ಜಿ ನೀಡಿ ಗಮನಸೆಳೆದರು.

ಕಾರ್ಯಕ್ರಮದಲ್ಲಿ ಶಿವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಸಿ.ಉಷಾ, ಉಪಾಧ್ಯಕ್ಷೆ ಜೆ.ಬಿ.ನವ್ಯಶ್ರೀ, ತಾ.ಪಂ. ಇಓ ಲೋಕೇಶ್‌ಮೂರ್ತಿ, ಅಭಿಯಂತರ ಗಣೇಶ್‌ ಈಶ್ವರ್ ಹೆಗ್ಗಡೆ, ಡಿ.ಶ್ರೀಧರ್, ಕಾರ್ಯದರ್ಶಿ ಪ್ರಕಾಶ್ ಮತ್ತು ಗ್ರಾ.ಪಂ.ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ