Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ‘ಕೈ’ ಕೊಟ್ಟಿದ್ದರಿಂದ ಬಿಜೆಪಿ ಸೇರಿದೆ – ಶಿವರಾಮೇಗೌಡ

ಕಾಂಗ್ರೆಸ್ ಪಕ್ಷವನ್ನು ಸೇರಲು ನಾನು ಮೊದಲ ಆದ್ಯತೆ ನೀಡಿದ್ದೆ, ಆದರೆ ಆ ಪಕ್ಷದ ನಾಯಕರು ಚಲುವರಾಯಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದರಿಂದ ನಾನು ಬಿಜೆಪಿ ಸೇರ್ಪಡೆಯಾಗಬೇಕಾಯಿತು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದರು.

ನಾಗಮಂಗಲ ಪಟ್ಟಣದ ಪಟ್ಟಣದ ಬಿಜೆಪಿ ಕಚೇರಿಗೆ ತೆರಳಿಯಲ್ಲಿ ಮಾತನಾಡಿದ ಅವರು, ನಾನು ಬದುಕಿರುವವರೆಗೂ ಬಿಜೆಪಿ ಪಕ್ಷವನ್ನ ಬಿಟ್ಟು ಹೋಗುವುದಿಲ್ಲ, ನನ್ನ ಅಭಿವೃದ್ಧಿ ಬಿಜೆಪಿ ಪಕ್ಷದಿಂದಲೇ ಸಾಧ್ಯ. ತಾಲೂಕಿನಲ್ಲಿ ಎದುರಾಳಿಗಳು ಶಕ್ತಿಯುತವಾಗಿದ್ದಾರೆ. ನಾಗಮಂಗಲದಲ್ಲಿ ನಾನು ಸರ್ವೇ ಮಾಡಿಸಿದ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಲು 15 ಸಾವಿರ ಮತ ಕಡಿಮೆ ಕಾಣುತಿತ್ತು, ಈ ನಿಟ್ಟಿನಲ್ಲಿ ಆದರೆ ಆ ಪ್ರಯತ್ನ ಪಲಿಸುವ ಹೊತ್ತಿಗೆ ಮುಖ್ಯಮಂತ್ರಿಗಳು ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು ಎಂದರು.

ಬಿಜೆಪಿ ಸೇರುವಾಗ ತಾಲೂಕಿನಲ್ಲಿ ಪೈಟರ್ ರವಿ ಇದಾರೆ, ನಾನು ಏನು ಮಾಡುವುದು ಎಂದು ಬಿಜೆಪಿ ನಾಯಕರ ಬಳಿ ಹೇಳಿದ್ದೆ. ಆದಾದ ಅರ್ಧ ಗಂಟೆಯ ನಂತರ ಮತ್ತೊಮ್ಮೆ ಪ್ರಭಾವಿ ವ್ಯಕ್ತಿಗಳ ಜೊತೆ ಮಾತುಕತೆ ನೆಡೆಯಿತು, ಅವರು ನಿನ್ನ ಜೊತೆಗೆ ನಾವಿದ್ದೇವೆ ಎಂಬ ಭರವಸೆ ಕೊಟ್ಟರು, ಅನಂತರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರಿಕೊಳ್ಳುವ ಮನಸ್ಸು ಮಾಡಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲವು ನೀತಿ ನಿಯಮಗಳು ಇವೆ, ಅದರಂತೆ ಸುಧಾ ಶಿವರಾಮೇಗೌಡ ಹೆಸರನ್ನ ಸೂಚಿಸಲಾಗಿದೆ. ಟಿಕೆಟ್ ಕೊಡುವುದು ನನಗೂ ಕೂಡ ಗೊತ್ತಿರಲಿಲ್ಲ, ಅವರಿಗೆ ಅರೋಗ್ಯ ಸರಿ ಇಲ್ಲ ಎಂದರೂ ಕೂಡ ಅವರಿಗೆ ಟಿಕೆಟ್ ಕೊಡುತ್ತೇವೆ ಎಂದಿನಂತೆ ನೀನು ಮತ್ತೆ ನಿನ್ನ ಮಗ ತಾಲೂಕಿನಲ್ಲಿ ನಮ್ಮ ಕಾರ್ಯಕರ್ತರ ಜೊತೆಗೂಡಿ ಸಂಚಾರ ಮಾಡಿ ಖಂಡಿತಾ ಗೆದ್ದೇ ಗೆಲ್ಲುತ್ತಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಾಗಮಂಗಲ ಬಿಜೆಪಿ ಉಸ್ತುವಾರಿ ಮಾರುತಿ ಪವರ್, ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ತೊಳಲಿ ಕೃಷ್ಣಮೂರ್ತಿ, ವಿನೋದ್, ಉಪರಹಳ್ಳಿ ಸುರೇಶ್, ಶಿವನಂಜೇಗೌಡ, ಬೆಳ್ಳೂರು ಆನಂದ್, ಅನುರಾಧ, ರಾಮಕೃಷ್ಣ, ಕೃಷ್ಣಕಾಂತ್, ಮನು ಬಿಂಡಿಗನವಿಲೆ, ಕೊಪ್ಪ ಶಿವರಾಜ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ