Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯ ಬಗ್ಗೆ ಬಾಲಿಶ ಹೇಳಿಕೆ ನೀಡಿದ ಸಿ.ಟಿ.ರವಿ ಕ್ಷಮೆಯಾಚಿಸಲಿ : ಬಿ.ಎಸ್.ಶಿವಣ್ಣ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು “ಸಿದ್ರಾಮುಲ್ಲಾಖಾನ್” ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಬಾಲಿಶತನ ಹಾಗೂ ಕುಚೋದ್ಯದ ನಿಂದನೆಯಾಗಿದ್ದು, ಕೂಡಲೇ ಅವರು ಬಹಿರಂಗ ಕ್ಷಮೆಯಾಚನೆ ಮಾಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಆಗ್ರಹಿಸಿದ್ದಾರೆ.

ಸಿ.ಟಿ ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಮರ್ಯಾದೆಯ ಸೀಮೆಯನ್ನು ಮೀರಿ ಮಾತನಾಡಿದ್ದಾರೆ. ನಾವು ಮೋದಿಯವರನ್ನು “ಮನುವಾದಿ ಮೋದಿ”, “ಅಹಿಂದ ವಿರೋಧಿ” ಅಮಿತ್ ಶಾ,”ಶೂದ್ರ ವಿರೋಧಿ” ಆರ್.ಎಸ್.ಎಸ್ ಎಂದು ಹೇಳಿಕೆ ನೀಡಿದರೆ ನೀವು ಸಹಿಸಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಕೆ ಕೊಟ್ಟ ನಂತರ ಸಿ.ಟಿ.ರವಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದಾರೆ. “ಹೌದು ಹುಲಿಯಾ” ಹೇಳಿಕೆಯನ್ನು ಸ್ವೀಕರಿಸಿದ ರೀತಿ ಇದನ್ನು ಸ್ವೀಕರಿಸಲಿ ಎಂದು ವಿತಂಡವಾದ ಮಾಡುತ್ತಿದ್ದಾರೆ. ಮುಗ್ಧ ಅಭಿಮಾನಿಯೊಬ್ಬ ಮಾಡಿದ ಪ್ರಶಂಸೆಯನ್ನು ಸ್ವೀಕರಿಸಲಾಗಿದೆ ಎಂದ ಮಾತ್ರಕ್ಕೆ ಕೋಮುವಾದಿ ಮನಸ್ಥಿತಿಯ ಸಿ.ಟಿ.ರವಿ ಹೇಳಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ರಾಜ್ಯದ ಧ್ವನಿ ಇಲ್ಲದ ಶೋಷಿತರ ಧ್ವನಿಯಾಗಿರುವ ಸಿದ್ದರಾಮಯ್ಯನವರ ಬಗ್ಗೆ ಕುಚೇಷ್ಟೆ ಹೇಳಿಕೆಗಳನ್ನು ನೀಡುತ್ತಿರುವ ಸಿ.ಟಿ.ರವಿಯವರು ಈ ಬಗ್ಗೆ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.

ಈ ರಾಷ್ಟ್ರದ ಅವಿಭಾಜ್ಯ ಅಂಗವಾಗಿರುವ ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರೋಧಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ಕುಡಿಗಳ ವಿರುದ್ಧ ಹೋರಾಟ ಮಾಡಲು ಶೂದ್ರ ಶಕ್ತಿಗಳಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಕಾಲ ಸನ್ನಿಹಿತವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ