ಮಂಡ್ಯ ನಗರದಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಬೂದನೂರು ನಿವೇಶನರಹಿತ ಮಹಿಳೆಯರು “ಸೀಮಂತ ಶಾಸ್ತ್ರ” ನೆರವೇರಿಸಿ ಗಮನ ಸೆಳೆದರು.
ಸೋಮವಾರ ಮಧ್ಯಾಹ್ನ ಮಂಡ್ಯದ ಉಪ ವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಡ್ಯ ತಾಲ್ಲೂಕಿನ ಬೂದನೂರು ನಿವೇಶನರಹಿತ ಮಹಿಳೆಯರು ಉಪ ವಿಭಾಗಾಧಿಕಾರಿ ಹೆಚ್.ಎಸ್.ಕೀರ್ತನ ಅವರಿಗೆ ಅರಿಸಿನ-ಕುಂಕುಮವಿಟ್ಟು, ಬಳೆ ತೊಡಿಸಿ ಹೂ ಮುಡಿಸಿ ಆಕ್ಷತೆ ಹಾಕಿ, ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿ ಶುಭ ಹಾರೈಸಿದರು.

ಬಳಿಕ ಅಕ್ಕಿ, ಬೆಲ್ಲ, ಕಾಯಿ, ಕೊಬ್ಬರಿ ಹಾಗೂ ಎಲೆ ಅಡಿಕೆ ಬಾಳೆಹಣ್ಣು ಹಾಗೂ ಸೀರೆಯನ್ನು ನೀಡುವ ಮೂಲಕ ಮಡಿಲು ತುಂಬುವ ಶಾಸ್ತ್ರ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಸವಿತಾ, ಸುಧಾ, ರಂಜಿತಾ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಚಂದ್ರಣ್ಣ ಮೊದಲಾದವರಿದ್ದರು.




