ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಮಂದಿ ಆರೋಪಿಗಳನ್ನು ಶಿವಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲ್,ಚಾಕು ಹಾಗೂ ಎರಡು ಲಾಂಗುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 10-07-2022 ರಂದು ಬೆಳಗಿನ ಜಾವ 01-30 ಗಂಟೆಯ ಸಮಯದಲ್ಲಿ ‘ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಹಟ್ನ ಗ್ರಾಮದ ಪಟ್ಟಲದಮ್ಮನ ದೇವಾಲಯದ ಹತ್ತಿರ ಆರು ಮಂದಿ ಅಪರಿಚಿತರು, ಸ್ಕೂಟರ್‌ಗಳನ್ನು ನಿಲ್ಲಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ಮಾಹಿತಿ ತಿಳಿದು ಬಂದ ಮೇರೆಗೆ ಶಿವಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಜಯಲಕ್ಷಮ್ಮ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಸುತ್ತುವರೆದು ಹಿಡಿದು ಆರೋಪಿತರಿಂದ ಒಂದು ಪಿಸ್ತೂಲ್, ಎರಡು ಕಬ್ಬಿಣದ ಲಾಂಗ್, ಒಂದು ಮೊಬೈಲ್, ಒಂದು ಪ್ಲಾಸ್ಟಿಕ್ ಹಗ್ಗ ಒಂದು ಬ್ಯಾಟರಿ, ಒಂದು ಬಾಕು,ಎರಡು ಬೈಕ್‌ಗಳು,ಕಾರದಪುಡಿ ಒಟ್ಟಿಗೆ ಸಿಕ್ಕಿದ್ದು, ಆರೋಪಿಗಳನ್ನು ವಿಚಾರಣೆ ಮಾಡಲಾಗಿ ರಸ್ತೆಯಲ್ಲಿ ಬರುವ ಪ್ರಯಾಣಿಕರನ್ನು ಅಡ್ಡಹಾಕಿ ಭಯಪಡಿಸಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದರು.
ಈ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.