Friday, November 20, 2026

ಪ್ರಾಯೋಗಿಕ ಆವೃತ್ತಿ

ಕನ್ನಡಿಗರ ಕೆಣಕಿ ಬೆಲೆತೆತ್ತ ಗಾಯಕ | ಕನ್ನಡ ಚಿತ್ರರಂಗದಿಂದಲೇ ‘ಸೋನು ನಿಗಮ್’ ಬ್ಯಾನ್

ಕನ್ನಡಿಗರನ್ನು ಭಯೋತ್ಪಾದರಿಗೆ ಹೋಲಿಕೆ ಮಾಡಿ ಮಾತಾನಾಡಿದ್ದಲ್ಲದೇ ಉದ್ದಟತನ ಮಾತುಗಳಿಂದ ವಿವಾದಕ್ಕೀಡಾಗಿರುವ ಉತ್ತರ ಭಾರತೀಯ ಗಾಯಕ ಸೋನು ನಿಗಮ್ ಕನ್ನಡ ಹಾಡುಗಳನ್ನು ಹಾಡಿಸದಿರಲು ಕರ್ನಾಟಕ ಫಿಲಂ ಚೇಂಬರ್ ನಿರ್ಧರಿಸಿದೆ.

ಇನ್ನು ಮುಂದೆ ಸೋನು ನಿಗಮ್ ರಿಂದ ಮ್ಯೂಸಿಕಲ್ ನೈಟ್ಸ್ ಮಾಡಿಸುವುದಿಲ್ಲ. ಕರ್ನಾಟಕದ ಯಾವುದೇ ಕಾರ್ಯಕ್ರಮಕ್ಕೆ ಕರೆಸುವಂತಿಲ್ಲ. ಯಾವುದೇ ಖಾಸಗಿ ಕಾರ್ಯಕ್ರಮಗಳಿಗೂ ಅವರಿಗೆ ಆಹ್ವಾನ ನೀಡುವಂತಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ನಂತರ ಮಾತನಾಡಿದ ಅವರು ಘಟನೆ ಬಳಿಕ ಈವರೆಗೂ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ. ಗಾಯಕ ಸೋನು ನಿಗಮ್ ಗೆ ಇನ್ನೂ ತಮ್ಮ ತಪ್ಪಿನ ಅರಿವಾಗಿಲ್ಲ ಎಂದು ಅವರು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ