ಮಂಡ್ಯ ಜಿಲ್ಲೆಯಾದ್ಯಂತ ಪ್ರಸ್ತುತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳನ್ನು ರೈತರು ಕೈಗೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯ ವತಿಯಿಂದ ರಾಗಿ ಮತ್ತು ಭತ್ತದ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಜೊತೆಗೆ 78 ಹೆಚ್ಚುವರಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿಯೂ (ಪಿ.ಎ.ಸಿ.ಎಸ್.) ವಿತರಣೆ ಮಾಡಲಾಗುತ್ತಿದೆ. ರೈತರ ಎಫ್.ಐ.ಡಿ.ಯಲ್ಲಿ ಸೇರ್ಪಡೆಯಾಗಿರುವ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗಧಿತ ಪ್ರಮಾಣದ ಬಿತ್ತನೆ ಬೀಜ ಪರ್ಮಿಟ್ ಅನ್ನು ರೈತ ಸಂಪರ್ಕ ಕೇಂದ್ರದಲ್ಲಿ ಪಡೆದು ವಿತರಣಾ ಕೇಂದ್ರದಲ್ಲಿ ಬಿತ್ತನೆ ಬೀಜವನ್ನು ಪಡೆಯುವುದು. ಒಂದು ವೇಳೆ ಎಫ್.ಐ.ಡಿ.ಯಲ್ಲಿ ವಿಸ್ತೀರ್ಣ ಸೇರ್ಪಡೆಯಾಗದಿದ್ದಲ್ಲಿ ಸಂಬಂಧಿಸಿದ ಆರ್.ಟಿ.ಸಿ. ಸಲ್ಲಿಸಿ ಸೇರ್ಪಡೆಗೊಳಿಸಿಕೊಂಡು ಬಿತ್ತನೆ ಬೀಜ ಪಡೆಯಬಹುದಾಗಿದೆ.
ತಾಲ್ಲೂಕುವಾರು, ತಳಿವಾರು ಲಭ್ಯವಿರುವ ಬಿತ್ತನೆ ಬೀಜಗಳ ವಿವರ ಇಂತಿದ್ದು ಮಂಡ್ಯ ತಾಲೂಕಿನಲ್ಲಿ ಭತ್ತ-ಎಂಟಿಯು-1001 550 ಕ್ವಿಂಟಾಲ್, ಭತ್ತ-ಆರ್ ಎನ್ ಆರ್-15048-31 ಕ್ವಿಂಟಾಲ್, ರಾಗಿ-ಎಂ ಆರ್-6- 15 ಕ್ವಿಂಟಾಲ್ ಲಭ್ಯವಿರುತ್ತದೆ.
ಮದ್ದೂರು ತಾಲೂಕಿನಲ್ಲಿ- ಭತ್ತ-ಎಂಟಿಯು-1001, 385 ಕ್ವಿಂಟಾಲ್, ರಾಗಿ-ಜಿಪಿಯು-28- 9 ಕ್ವಿಂಟಾಲ್, ರಾಗಿ-ಎಂ ಆರ್(6) 8 ಕ್ವಿಂಟಾಲ್, ರಾಗಿ-ಎಂ.ಎಲ್-365, 21 ಕ್ವಿಂಟಾಲ್, ರಾಗಿ-ಕೆ.ಎಂ.ಆರ್-301, 9 ಕ್ವಿಂಟಾಲ್ ಲಭ್ಯವಿರುತ್ತದೆ.
ಮಳವಳ್ಳಿ ತಾಲೂಕಿನಲ್ಲಿ- ಭತ್ತ-ಐಆರ್-64, 390 ಕ್ವಿಂಟಾಲ್, ಭತ್ತ-ಆರ್ ಎನ್ ಆರ್-15048- 125 ಕ್ವಿಂಟಾಲ್, ರಾಗಿ-ಜಿಪಿಯು-28, 26 ಕ್ವಿಂಟಾಲ್, ರಾಗಿ-ಎಂ ಎಲ್-365, 79 ಕ್ವಿಂಟಾಲ್ ಲಭ್ಯವಿರುತ್ತದೆ.
ಶ್ರೀರಂಗಪಟ್ಟಣ ಭತ್ತ-ಎಂಟಿಯು-1001-550 ಕ್ವಿಂಟಾಲ್, ಭತ್ತ ಜ್ಯೋತಿ-150 ಕ್ವಿಂಟಾಲ್, ಭತ್ತ-ಆರ್ ಎನ್ ಆರ್-64- 10 ಕ್ವಿಂಟಾಲ್, ರಾಗಿ-ಎಂ ಆರ್-6- 4 ಕ್ವಿಂಟಾಲ್ ಲಭ್ಯವಿರುತ್ತದೆ.
ಪಾಂಡವಪುರ ಭತ್ತ-ಎಂಟಿಯು-1001-135 ಕ್ವಿಂಟಾಲ್, ಭತ್ತ-ಜ್ಯೋತಿ 24 ಕ್ವಿಂಟಾಲ್, ಭತ್ತ-ಐಆರ್-64- 59 ಕ್ವಿಂಟಾಲ್, ರಾಗಿ-ಜಿಪಿಯು-28- 12 ಕ್ವಿಂಟಾಲ್, ರಾಗಿ-ಎಂ ಆರ್-6- 18 ಕ್ವಿಂಟಾಲ್, ರಾಗಿ-ಕೆಎಂಆರ್-301- 16 ಕ್ವಿಂಟಾಲ್ ಲಭ್ಯವಿರುತ್ತದೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ ಭತ್ತ ಎಂಟಿಯು 1001-80 ಕ್ವಿಂಟಾಲ್, ಭತ್ತ ಜ್ಯೋತಿ 55 ಕ್ವಿಂಟಾಲ್, ಭತ್ತ-ಐಆರ್-64- 30 ಕ್ವಿಂಟಾಲ್, ಭತ್ತ- ಆರ್ ಎನ್ ಆರ್-15048- 80 ಕ್ವಿಂಟಾಲ್, ಭತ್ತ-ಬಿ ಆರ್-2655- 60 ಕ್ವಿಂಟಾಲ್, ರಾಗಿ-ಜಿಪಿಯು-28- 15 ಕ್ವಿಂಟಾಲ್, ರಾಗಿ-ಎಂ ಆರ್-6- 55 ಕ್ವಿಂಟಾಲ್ ಲಭ್ಯವಿರುತ್ತದೆ.
ನಾಗಮಂಗಲ ಭತ್ತ-ಎಂಟಿಯು-1001- 65 ಕ್ವಿಂಟಾಲ್, ರಾಗಿ-ಜಿಪಿಯು-28- 38 ಕ್ವಿಂಟಾಲ್, ರಾಗಿ-ಎಂ ಆರ್(1) 15 ಕ್ವಿಂಟಾಲ್, ರಾಗಿ-ಎಂ ಆರ್ (6) 28 ಕ್ವಿಂಟಾಲ್, ರಾಗಿ-ಎಂ ಎಲ್-365- 20 ಕ್ವಿಂಟಾಲ್, ರಾಗಿ-ಕೆಎಂಆರ್-301- 17 ಕ್ವಿಂಟಾಲ್ ಲಭ್ಯವಿರುತ್ತದೆ.
ಒಟ್ಟು ಜಿಲ್ಲೆಯಲ್ಲಿ ಭತ್ತ ಎಂಟಿಯು-1001- 1765 ಕ್ವಿಂಟಾಲ್, ಭತ್ತ- ಜ್ಯೋತಿ 229, ಭತ್ತ-ಐಆರ್-64- 479 ಕ್ವಿಂಟಾಲ್, ಭತ್ತ-ಆರ್ ಎನ್ ಆರ್-15048- 236 ಕ್ವಿಂಟಾಲ್, ಭತ್ತ-ಬಿ ಆರ್-2655-60 ಕ್ವಿಂಟಾಲ್ ಮತ್ತು ರಾಗಿ ಜಿಪಿಯು-28- 100 ಕ್ವಿಂಟಾಲ್, ಎಂ ಆರ್ (1) 15 ಕ್ವಿಂಟಾಲ್, ಎಂ ಆರ್ (6) 128 ಕ್ವಿಂಟಾಲ್, ಎಂ ಎಲ್-365- 120 ಕ್ವಿಂಟಾಲ್, ಕೆಎಂಆರ್-301- 42 ಕ್ವಿಂಟಾಲ್ ಬಿತ್ತನೆ ಬೀಜ ಪಡೆಯಬಹುದು ಎಂದು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




