Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ನಗರ | ‘ಯುವನಿಧಿ’ ಯೋಜನೆ ಕುರಿತ ವಿಶೇಷ ಉಪನ್ಯಾಸ ಯಶಸ್ವಿ

ಕೆ.ಆರ್.ನಗರ​ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಲಿಗ್ರಾಮದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮೈಸೂರು, ಕಾಲೇಜಿನ ಉದ್ಯೋಗ ಮಾಹಿತಿ ಕೋಶ ಇವುಗಳ ಸಹಯೋಗದೊಂದಿಗೆ ನಿರುದ್ಯೋಗಿ ಯುವಜನರಿಗೆ ಆರ್ಥಿಕ ನೆರವು ಮತ್ತು ಕೌಶಲ್ಯ ತರಬೇತಿಯನ್ನು ಒದಗಿಸುವ ‘ಯುವನಿಧಿ’ ಯೋಜನೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
​
​ಸಾಲಿಗ್ರಾಮ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಉದಯ ಶಂಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ “ಯುವನಿಧಿಯಂತಹ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ತೊಡಕಿಲ್ಲದೆ ತಲುಪಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ. ತಾಲ್ಲೂಕು ಅನುಷ್ಠಾನ ಸಮಿತಿಯು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸನ್ನದ್ಧವಾಗಿದೆ. ಯುವಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಅ.12ರಂದು ಕೆ ಆರ್ ನಗರದ ರೇಡಿಯೋ ಸಭಾಂಗಣದಲ್ಲಿ ನಡೆಯುವ ಉದ್ಯೋಗ ಮೇಳ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂದು ತಿಳಿಸಿದರು.

​ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮೈಸೂರು ಸಹಾಯಕ ನಿರ್ದೇಶಕರಾದ ಶ್ರೀಮತಿ ರಾಣಿ ಅವರು, ಯುವನಿಧಿ ಯೋಜನೆಯ ಸಮಗ್ರ ಮಾಹಿತಿಯನ್ನು ಪ್ರಸ್ತುತಪಡಿಸಿದರು.”ಯುವನಿಧಿ ಕೇವಲ ನಿರುದ್ಯೋಗ ಭತ್ಯೆಯಲ್ಲ, ಇದು ಉದ್ಯೋಗ ಹುಡುಕುವ ನಿಮ್ಮ ಪಯಣದಲ್ಲಿ ದೊರೆಯುವ ಒಂದು ತಾತ್ಕಾಲಿಕ ಆಸರೆ. ಪದವೀಧರರಿಗೆ ಮಾಸಿಕ ₹3,000 ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ ₹1,500 ನೆರವು ನೀಡಲಾಗುತ್ತಿದೆ. ಆದರೆ, ಯುವಜನತೆ ಕೇವಲ ಭತ್ಯೆಯನ್ನು ಪಡೆಯುವುದಕ್ಕೆ ಸೀಮಿತವಾಗದೇ, ಸರ್ಕಾರ ಒದಗಿಸುವ ‘ಯುವನಿಧಿ ಪ್ಲಸ್’ ಅಡಿಯಲ್ಲಿನ ಉಚಿತ ಕೌಶಲ್ಯ ತರಬೇತಿಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

​ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗೋವಿಂದ ಗೌಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನುಷ್ಠಾನ ಸಮಿತಿಯ ಸದ್ಯಸರಾದ ಮಹದೇವ, ಮಹಾಲಿಂಗಪ್ಪ, ಮಹದೇವ ನಾಯಕ, ಮೂರ್ತಿ ಸಿ ಎಸ್, ಕಾಂತರಾಜು ಚೆಲುವಯ್ಯ, ಮೋಹನ್,ರಂಗಸ್ವಾಮಿ, ರವಿ, ಲೋಕೇಶ್, ವಾಸಿಂ ಪಾಷಾ, ಉದ್ಯೋಗ ಮತ್ತು ಮಾಹಿತಿ ಕೋಶದ ಸಂಚಾಲಕರಾದ ಡಾ.ಸತ್ಯನಾರಾಯಣ, ಸುರೇಶ್ ಚಲವಾದಿ, ಶ್ರೀನಿವಾಸ್ ಎಂ ಡಾ.ರಾಜೇಶ ಎ ಎಸ್, ಮಧು ಎಚ್ಎಸ್, ಡಾ. ಮಹೇಶ್ ಜಿ ಟಿ, ಮಂಜುನಾಥ್, ಡಾ. ಪ್ರತಿಮಾ, ಡಾ. ಸುವರ್ಣ, ಡಾ. ತಾಸೀನ್,ಡಾ.ಸುಮನ, ಡಾ.ಗಾಯಿತ್ರಮ.ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಉಪನ್ಯಾಸದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಕೇಳಿ ಯೋಜನೆಯ ಬಗ್ಗೆ ಸೂಕ್ತ ಉತ್ತರ ಪಡೆದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ