Tuesday, November 24, 2026

ಪ್ರಾಯೋಗಿಕ ಆವೃತ್ತಿ

ಆರೋಗ್ಯ ಕಾಪಾಡಿಕೊಳ್ಳುವುದು ನಿಜವಾದ ಸಾಧನೆ : ಶ್ರೀನಿವಾಸ್

ಶಾಲೆಗಳಲ್ಲಿ ಮಕ್ಕಳು ಎಷ್ಟು ಹೆಚ್ಚು ಅಂಕ ಪಡೆದರೆ ಅದನ್ನೇ ಸಾಧನೆ ಅಂದುಕೊಳ್ಳುತ್ತೇವೆ, ಆದರೆ ಜೀವನದ ನಿಜವಾದ ಸಾಧನೆ ಎಂದರೆ ಆರೋಗ್ಯ ಕಾಪಾಡಿಕೊಳ್ಳುವುದು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.

ಶ್ರೀರಂಗಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಇಂದು ಆಯೋಜಿಸಲಾಗಿದ್ದ ಶ್ರೀರಂಗಪಟ್ಟಣ ಕ್ರೀಡಾ ದಸರಾ 2025-26 ನೇ ಸಾಲಿನ ಮ್ಯಾರಥಾನ್ ಸ್ಪರ್ಧೆಗೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಶೈಕ್ಷಣಿಕವಾಗಿ ಅಂಕ ಕಡಿಮೆ ಪಡೆದರು ಜೀವನ ಸಾಗಿಸಬಹುದು ಆದರೆ ಆರೋಗ್ಯ ವೈಪರಿತ್ಯ ಉಂಟಾದರೆ ಸಾಧಿಸಲು ಸಾಧ್ಯವಿಲ್ಲ, ಕ್ರೀಡಾಳುಗಳು ಹಾಗೂ ಸಾರ್ವಜನಿಕರು ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡಿಗೆ, ಓಟದಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳ ಬಲ್ಲವರು ಮನಸ್ಸನ್ನು ಸದೃಢವಾಗಿ ಕಾಪಾಡಿಕೊಳ್ಳಲು ಸಾಧ್ಯ, ಮ್ಯಾರಥಾನ್ ಓಟದಲ್ಲಿ ಸ್ಪರ್ಧಿಸುವ ದೃಢತೆ ಇದೆ ಎಂದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಸಾಧನೆ ಗೈದವರು ಜಗತ್ ವಿಖ್ಯಾತಿ ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಅವರು ಮಾತನಾಡಿ ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬಹುದು ಹಾಗೂ ಆರೋಗ್ಯಕರವಾಗಿ ಜೀವಿಸಬಹುದು, ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನೆ ತಿಳಿಸಿದರು.

ಮ್ಯಾರಥಾನ್ ಸ್ಪರ್ಧೆಯ ವಿಜೇತರ ಪಟ್ಟಿ
20 ವರ್ಷ ಮೇಲ್ಪಟ್ಟ ಪುರುಷ ವಿಭಾಗ
ಭುವನ್ ಜಿ.ವಿ- ಪ್ರಥಮ ಸ್ಥಾನ, ವರುಣ್ ಗೌಡ-ದ್ವಿತೀಯ ಸ್ಥಾನ, ಸುದರ್ಶನ್ ಎ.ಬಿ- ತೃತೀಯ ಸ್ಥಾನ ಪಡೆದುಕೊಂಡರು.

21 ರಿಂದ 50 ವರ್ಷದ ಪುರುಷ ವಿಭಾಗ
ಮಣಿಕಂಠ ಪಿ,-ಪ್ರಥಮ ಸ್ಥಾನ, ಸುಮಂತ್ ಕುಮಾರ್ ಬಿ-ದ್ವಿತೀಯ ಸ್ಥಾನ, ಆನಂದ್ ಡಿ ಎಂ-ತೃತೀಯ ಸ್ಥಾನ ಪಡೆದುಕೊಂಡರು.

51 ವರ್ಷ ಮೇಲ್ಪಟ್ಟ ಪುರುಷರ ವಿಭಾಗ
ಹರೀಶ್ ಪಿ-ಪ್ರಥಮ ಸ್ಥಾನ, ಬಿ ಬಾಲಚಂದ್ರ- ದ್ವಿತೀಯ ಸ್ಥಾನ, ಆರ್ ಸೋಮಶೇಖರ್-ತೃತೀಯ ಸ್ಥಾನ ಪಡೆದುಕೊಂಡರು.

20 ವರ್ಷ ಮೇಲ್ಪಟ್ಟ ಮಹಿಳೆಯರು ವಿಭಾಗ
ಪ್ರಣಮ್ಯ-ಪ್ರಥಮ ಸ್ಥಾನ, ಜಯಶ್ರೀ- ದ್ವಿತೀಯ ಸ್ಥಾನ, ದಿವ್ಯಶ್ರೀ- ತೃತೀಯ ಸ್ಥಾನ ಪಡೆದುಕೊಂಡರು,

21 ರಿಂದ 50 ವರ್ಷದ ಮಹಿಳೆಯರ ವಿಭಾಗ
ಅನನ್ಯ- ಪ್ರಥಮ ಸ್ಥಾನ, ಶಾಂತಕುಮಾರಿ ಕೆ ಬಿ- ದ್ವಿತೀಯ ಸ್ಥಾನ, ಅರ್ಪಿತ- ತೃತೀಯ ಸ್ಥಾನ ಪಡೆದುಕೊಂಡರು,

51 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ
ಎನ್ ಆರ್ ಶೋಭಾ- ಪ್ರಥಮ ಸ್ಥಾನ, ವಿಜಯ ಎಸ್ ಜಿ- ದ್ವಿತೀಯ ಸ್ಥಾನ, ಮಂಜುಳಾ- ತೃತೀಯ ಸ್ಥಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಎಚ್ ಐ.ವಿ ನಿಯಂತ್ರಣಾಧಿಕಾರಿ ಆಶಾಲತಾ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ಅಧೀಕ್ಷಕ ನಾಗಭೂಷಣ್, ಅಚೀವರ್ಸ್ ಅಕಾಡೆಮಿಯ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ