Tuesday, November 24, 2026

ಪ್ರಾಯೋಗಿಕ ಆವೃತ್ತಿ

186 ಯುವಕರಿಗೆ ಬಂದೂಕು ತರಬೇತಿ ನೀಡಿದ ಶ್ರೀರಾಮಸೇನೆ !

ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ರಾಜ್ಯದ ಧಾರವಾಡದಲ್ಲಿ ಆರು ದಿನಗಳ ಬಂದೂಕು ಮತ್ತು ಯುದ್ಧಕಲೆ ತರಬೇತಿ ಶಿಬಿರವನ್ನು ನಡೆಸಿದ್ದು, ರಾಜ್ಯದಾದ್ಯಂತ 186 ಯುವಕರಿಗೆ ತರಬೇತಿ ನೀಡಿದೆ ಎಂದು ಸೌತ್‌ಫಸ್ಟ್‌ ವರದಿ ಮಾಡಿದೆ. ಶ್ರೀರಾಮ ಸೇನೆಯು ತರಬೇತಿಯನ್ನು ಸಮರ್ಥಿಸಿಕೊಂಡಿದ್ದು, ಇದು ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಲು ಆಯ್ದ ಕಾರ್ಯಕರ್ತರಿಗೆ ವಾರ್ಷಿಕವಾಗಿ ನಡೆಸಲಾಗುವ ಆತ್ಮರಕ್ಷಣೆಯ ಕಾರ್ಯಕ್ರಮವಾಗಿದೆ ಎಂದು ಹೇಳಿಕೊಂಡಿದೆ.

ಆರು ದಿನಗಳ ಶಿಬಿರದಲ್ಲಿ ಯುವಕರಿಗೆ ಲಾಠಿ ನಿರ್ವಹಣೆ, ಕತ್ತಿವರಸೆ, ಕರಾಟೆ, ದೃಗ್ವಿಜ್ಞಾನ, ಮತ್ತು ಏರ್ ಗನ್ ಬಳಕೆ ಸೇರಿದಂತೆ ಹಲವು ಯುದ್ಧ ಕಲೆಗಳ ತರಬೇತಿ ನೀಡಲಾಗಿದೆ ಎಂದು ವರದಿ ಹೇಳಿದೆ. ಬಲಪಂಥೀಯ ಸಂಘಟನೆಯ ಈ ಚಟುವಟಿಕೆಯು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಬಗ್ಗೆ ಆತಂಕ ಹುಟ್ಟುಹಾಕಿದೆ.

ಶಿಬಿರವನ್ನು ಸಮರ್ಥಿಸಿಕೊಂಡಿರುವ ಸಂಘಟನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, “ಹಿಂದೂ ಕಾರ್ಯಕರ್ತರು ಮತ್ತು ಸಮಾಜದ ಮೇಲಿನ ದಾಳಿಗಳಿಗೆ ಪ್ರತಿಕ್ರಿಯಿಸಲು ಸಿದ್ದತೆ ಇದಾಗಿದೆ” ಎಂದು ಹೇಳಿದ್ದಾರೆ.

“ಏರ್‌ಗನ್ ಮೂಲಕ ಸ್ವ-ರಕ್ಷಣೆ ತರಬೇತಿ ನೀಡಿದ್ದೇವೆ. ಪ್ರತಿವರ್ಷ ಆಯ್ದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ಸವಾಲು ಎದುರಿಸಲು ಯುವಕರನ್ನು ಸಜ್ಜು ಮಾಡಿದ್ದೇವೆ. ಸ್ವ-ಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಲಾಗಿದೆ” ಎಂದು ಕುಲಕರ್ಣಿ ಹೇಳಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ. ಅದಾಗ್ಯೂ, ಈದಿನ.ಕಾಂ ಶ್ರೀರಾಮ ಸೇನೆಯ ತರಬೇತಿ ಶಿಬಿರ ಬಾಗಲಕೋಟೆಯಲ್ಲಿ ನಡೆದಿದೆ ಎಂದು ವರದಿ ಮಾಡಿದೆ.

‘‘ಭಾರತದಲ್ಲಿ ಹಿಂದುತ್ವವಾದಿ, ಕೋಮುವಾದಿ ಭಯೋತ್ಪಾದಕತೆ ಹೆಚ್ಚುತ್ತಿದೆ. ಸಂಘಪರಿವಾರವು ಹಿಂದುತ್ವದ ಹೆಸರಿಲ್ಲಿ ಕೋಮುವಾದಿ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ. ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರ್, ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಸೇರಿದಂತೆ ಹಲವಾರು ಚಿಂತಕರ ಹತ್ಯೆಯ ಹಿಂದೆ ಸಂಘಪರಿವಾರದ ಸಂಚು ಇದೆ ಎಂಬ ಆರೋಪಗಳಿವೆ. ಇಂತಹ ಆರೋಪಗಳಿಗೆ ಪುಷ್ಠಿಕೊಡುವಂತಹ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ” ಎಂದು ಈದಿನ.ಕಾಂ ವರದಿ ಹೇಳಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ