Tuesday, October 22, 2024

ಪ್ರಾಯೋಗಿಕ ಆವೃತ್ತಿ

ಗೌರಿ ಹತ್ಯೆ ಆರೋಪಿಯನ್ನು ಹುದ್ದೆಯಿಂದ ಹೊರಗಿಟ್ಟ ಶಿವಸೇನೆ | ಚುನಾವಣೆಗಾಗಿ ನೈತಿಕತೆಯ ಮುಸುಕು ಎಂದ ಸುಪ್ರಿಯಾ ಸುಳೆ

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗಾರ್ಕರ್‌ನ್ನು ಶಿವಸೇನೆ (ಶಿಂದೆ ಬಣ) ಪಕ್ಷದ ಹುದ್ದೆಯಿಂದ ಹೊರಗಿಟ್ಟಿರುವುದು ‘ಚುನಾವಣೆಯ ಕಾರಣಕ್ಕೆ” ಎಂದು ಎನ್‌ಸಿಪಿ (ಶರದ್‌ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಸೋಮವಾರ ಹೇಳಿದ್ದಾರೆ.

“ಗೌರಿ ಲಂಕೇಶ್‌ ಅವರ ಹತ್ಯೆ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಂಡು, ಈಗ ಹುದ್ದೆಯಿಂದ ತಾತ್ಕಾಲಿಕವಾಗಿ ದೂರ ಇಟ್ಟಿದ್ದಾರೆ. ‘ರಾಜ್ಯದಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕೆ ಇಂತಹ ನೈತಿಕತೆಯ ಮುಸುಕು ಹಾಕಿಕೊಳ್ಳಲಾಗುತ್ತಿದೆ’. ಚುನಾವಣೆ ಮುಗಿಯುತ್ತಿದ್ದಂತೆಯೇ ಇಂತಹ ಅಪರಾಧಿಗಳನ್ನು ಮತ್ತೊಮ್ಮೆ ಹತ್ತಿರ ಸೇರಿಸಿಕೊಳ್ಳಲಾಗುತ್ತದೆ” ಎಂದು ಸುಳೆ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪಂಗಾರ್ಕರ್, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಕಳೆದ ಶುಕ್ರವಾರ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.

ಪಕ್ಷ ಸೇರ್ಪಡೆ ಬೆನ್ನಲ್ಲೇ ಪಂಗಾರ್ಕರ್‌ ಅನ್ನು ಜಲ್ನಾ ಜಿಲ್ಲೆಯ ಪ್ರಚಾರ ಸಮಿತಿಯ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಇದು ರಾಜ್ಯದಾದ್ಯಂತ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಸಿಎಂ ಏಕನಾಥ ಶಿಂದೆ, ಶ್ರೀಕಾಂತ್‌ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಅವರಿಗೆ ಯಾವುದೇ ಹುದ್ದೆ ನೀಡದಂತೆ ತಾತ್ಕಾಲಿಕ ಆದೇಶ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!